ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮುಗಿತು, ಈಗ ರಾಜಸ್ಥಾನದತ್ತ ಗಮನ

ಕಾಂಗ್ರೆಸ್ ತನ್ನ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಂತರ, ರಾಜಸ್ಥಾನದತ್ತ ಗಮನ ಹರಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ದೀರ್ಘಾವಧಿಯ ಭಿನ್ನಾಭಿಪ್ರಾಯಗಳನ್ನು ಯಾವ ರೀತಿ ಬಗೆಹರಿಸಬೇಕೆಂಬುದು ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.
ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್
ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್
Updated on

ನವದೆಹಲಿ: ಕಾಂಗ್ರೆಸ್ ತನ್ನ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಂತರ, ರಾಜಸ್ಥಾನದತ್ತ ಗಮನ ಹರಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ದೀರ್ಘಾವಧಿಯ ಭಿನ್ನಾಭಿಪ್ರಾಯಗಳನ್ನು ಯಾವ ರೀತಿ ಬಗೆಹರಿಸಬೇಕೆಂಬುದು ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ಈ ವಾರದ ಆರಂಭದಲ್ಲಿ ಯಾವುದೇ ಮಟ್ಟದಲ್ಲಿ ಅನುಭವಕ್ಕೆ ಪರ್ಯಾಯವಿಲ್ಲ ಎಂದು ಗೆಹ್ಲೋಟ್ ಹೇಳುವ ಮೂಲಕ ಉಭಯ ಮುಖಂಡರ ನಡುವೆ ಮುಸುಕಿನ ಗುದ್ದಾಟವನ್ನು ತೋರಿಸುತಿತ್ತು. 

ಯುವ ನಾಯಕರು ತಾಳ್ಮೆಯಿಂದಿರಬೇಕು, ಸಮಯ ಬಂದಾಗ ಅವರಿಗೆ ಅವಕಾಶಗಳು ಸಿಗುತ್ತವೆ ಎಂದು ಗೆಹ್ಲೋಟ್ ಸಲಹೆ ನೀಡಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ, ಆರ್ ಪಿಎನ್ ಸಿಂಗ್, ಜಿತಿನ್ ಪ್ರಸಾದ ಅವಕಾಶ ವಾದಿಗಳು ಎಂದು ಗೆಹ್ಲೋಟ್ ವಾಗ್ದಾಳಿ ನಡೆಸಿದರು.

ಗೆಹ್ಲೋಟ್  ಗಾಂಧಿ ಕುಟುಂಬದ ನಿಷ್ಠಾವಂತರಾಗಿ ದೀರ್ಘಕಾಲದಿಂದ ಹೆಸರುವಾಸಿಯಾಗಿದ್ದರೂ, ಗಾಂಧಿಯವರ ಆಪ್ತರಾಗಿರುವ ಅವರ ಸ್ಥಾನವು ಕಳೆದ ತಿಂಗಳ ಬೆಳವಣಿಗೆಗಳೊಂದಿಗೆ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. 2020 ರಲ್ಲಿ ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಪೈಲಟ್, ತರೂರ್ ಅವರಂತೆಯೇ ಬದಲಾವಣೆಯ ಏಜೆಂಟ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಇದೀಗ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಮುಗಿದಿದ್ದು, ರಾಜಸ್ಥಾನದ ಹಣಾಹಣಿಯತ್ತ ಮತ್ತೆ ಗಮನ ಹರಿಸಲಾಗಿದೆ. ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಗಾಂಧಿ ಕುಟುಂಬವೂ ಹೆಚ್ಚು ಇಷ್ಟಪಡುತ್ತಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಆದರೆ ಗಾಂಧಿಯವರಿಗೆ ಪೈಲಟ್ ಬಗ್ಗೆ ಸಂಪೂರ್ಣವಾಗಿ ಮನವರಿಕೆಯಾಗಿಲ್ಲ.

ಗೆಹ್ಲೋಟ್ ಅಥವಾ ಪೈಲಟ್ ರಾಜಸ್ಥಾನ ಉಸ್ತುವಾರಿ ಪಡೆಯಬಾರದು ಎಂದು ಪಕ್ಷ ನಿರ್ಧರಿಸುವ ಸಾಧ್ಯತೆಯಿದೆ. ಅಷ್ಟರಲ್ಲಿ ಮುಂದಿನ ಚುನಾವಣೆ ಬರಲಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ತೀವ್ರ ಪ್ರಯತ್ನ ನಡೆಸುತ್ತಿದೆ. 
      

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com