ಉದ್ಧವ್ ಬಣದ ಇನ್ನೂ ನಾಲ್ವರು ಶಾಸಕರು ಪಕ್ಷ ಬದಲಾಯಿಸಲಿದ್ದಾರೆ: ಕೇಂದ್ರ ಸಚಿವ ರಾಣೆ
ಪುಣೆ: ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷಕ್ಕೆ ಸೇರಲು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಅವರು ಶನಿವಾರ ಹೇಳಿದ್ದಾರೆ. ಆದರೆ ಆ ನಾಲ್ವರು ಶಾಸಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಕೇಂದ್ರ ಸರ್ಕಾರದ 'ರೋಜ್‌ಗಾರ್ ಮೇಳ'ದ ಭಾಗವಾಗಿ ಇಂದು ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, "ಶಿವಸೇನೆಯ 56 ಶಾಸಕರ ಪೈಕಿ ಆರರಿಂದ ಏಳು ಶಾಸಕರು ಮಾತ್ರ (ಉದ್ಧವ್ ಠಾಕ್ರೆ ಬಣದಲ್ಲಿ)ಅಲ್ಲಿ ಉಳಿದಿದ್ದಾರೆ. ಅವರೂ ಹೊರಬರುವ ಹಾದಿಯಲ್ಲಿದ್ದಾರೆ. ನಾಲ್ವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಆದರೆ ನಾನು ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ" ಎಂದಿದ್ದಾರೆ.
ಇದೇ ವೇಳೆ ಉದ್ಧ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಮಾಜಿ ಸಿಎಂ ರಾಜಕೀಯವು ಮಾತೋಶ್ರೀಗೆ ಸೀಮಿತವಾಗಿದೆ(ಮುಂಬೈನ ಬಾಂದ್ರಾದಲ್ಲಿರುವ ಠಾಕ್ರೆಯ ಖಾಸಗಿ ನಿವಾಸ ಮತ್ತು ಸೇನಾ ಭವನ, ಪಕ್ಷದ ಶಕ್ತಿ ಕೇಂದ್ರ). 'ಈಗ ಸೇನೆಯ ಯಾವುದೇ ಬಣ ಉಳಿದಿಲ್ಲ' ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ