ಓಯೋ ರೂಮ್‌ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಜೋಡಿಗಳ ಖಾಸಗಿ ವಿಡಿಯೋ ರೆಕಾರ್ಡ್: 4 ಆರೋಪಿಗಳ ಬಂಧನ

ಓಯೋ ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸಿ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ನಾಲ್ವರು ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೋಯ್ಡಾ: ಓಯೋ ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸಿ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ನಾಲ್ವರು ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಈ ಘಟನೆ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆರೋಪಿಗಳನ್ನು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.

ಓಯೋ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿ ಬಳಿಕ ಕೇಳಿದಷ್ಟು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇಲ್ಲದಿದ್ದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹೋಟೆಲ್‌ನ ಸಿಬ್ಬಂದಿ ಈ ಜಾಲದಲ್ಲಿ ಭಾಗಿಯಾಗಿಲ್ಲ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಗುಂಪಿನ ಸದಸ್ಯರು ಓಯೋ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಬುಕ್ ಮಾಡುತ್ತಿದ್ದರು. ಅಲ್ಲಿಂದ ಹೊರಡುವ ಮುನ್ನ ಯಾರ ಕಣ್ಣಿಗೂ ಕಾಣದಂತೆ ಕ್ಯಾಮೆರಾಗಳನ್ನು ಇರಿಸುತ್ತಿದ್ದರು ಎನ್ನಲಾಗಿದೆ. ಕೆಲವು ದಿನಗಳ ಬಳಿಕ ಮತ್ತೆ ಹೋಟೆಲ್ ಕೊಠಡಿ ಬುಕ್ ಮಾಡಿ ಕ್ಯಾಮೆರಾಗಳನ್ನು ಕೊಂಡೊಯ್ಯುತ್ತಿದ್ದರು. ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಜೋಡಿಗಳನ್ನು ಸಂಪರ್ಕಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com