ದೀಪಾವಳಿ ವಿರಾಮ ನಂತರ ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರಿಕೆ

ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ವಿರಾಮದ ನಂತರ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ತೆಲಂಗಾಣ ರಾಜ್ಯದ ನಾರಾಯಣ್ ಪೇಟ್ ಜಿಲ್ಲೆಯ ಮಕ್ತಲ್ ಎಂಬಲ್ಲಿ ಇಂದು ಗುರುವಾರ ಮುಂದುವರಿದಿದೆ. 
ಭಾರತ್ ಜೋಡೋ ಯಾತ್ರೆ
ಭಾರತ್ ಜೋಡೋ ಯಾತ್ರೆ
Updated on: 

ನಾರಾಯಣ್ ಪೇಟ್ (ತೆಲಂಗಾಣ): ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ವಿರಾಮದ ನಂತರ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ತೆಲಂಗಾಣ ರಾಜ್ಯದ ನಾರಾಯಣ್ ಪೇಟ್ ಜಿಲ್ಲೆಯ ಮಕ್ತಲ್ ಎಂಬಲ್ಲಿ ಇಂದು ಗುರುವಾರ ಮುಂದುವರಿದಿದೆ. 

ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯತ್ತಿರುವ ಭಾರತ್ ಜೋಡೋ ಯಾತ್ರೆ ಇದಾಗಿದ್ದು, ಇಂದಿಗೆ ಯಾತ್ರೆ 50 ದಿನಗಳನ್ನು ಪೂರೈಸಿದೆ.

ತೆಲಂಗಾಣ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್‌ ಗಾಂಧಿಯವರೊಂದಿಗೆ ಯಾತ್ರೆ ಬೆಳಗ್ಗೆ 6.30ಕ್ಕೆ ಮಕ್ತಲ್‌ನಿಂದ ಯಾತ್ರೆ ಪ್ರಾರಂಭಿಸಿದರು. 

ತೆಲಂಗಾಣ ರಾಜ್ಯದಲ್ಲಿ ಇದು ಎರಡನೇ ದಿನದ ಯಾತ್ರೆ. ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 23ರಂದು ಬೆಳಿಗ್ಗೆ ರಾಯಚೂರು ಮೂಲಕ ಕರ್ನಾಟಕದಿಂದ ನಿರ್ಗಮಿಸಿದ ನಂತರ ಗುಡೆಬೆಳ್ಳೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಿತ್ತು. ಅಕ್ಟೋಬರ್ 26 ರವರೆಗೆ ವಿರಾಮ ತೆಗೆದುಕೊಂಡಿತ್ತು. ಮಕ್ತಾಲ್‌ನಿಂದ 16 ದಿನಗಳ ಕಾಲ ತೆಲಂಗಾಣ ರಾಜ್ಯದಲ್ಲಿ ಯಾತ್ರೆ ಮುಂದುವರೆಯಲಿದ್ದು, 19 ವಿಧಾನಸಭಾ ಮತ್ತು 7 ಸಂಸದೀಯ ಕ್ಷೇತ್ರಗಳಲ್ಲಿ 375 ಕಿ.ಮೀ ದೂರದಲ್ಲಿ ಸಂಚರಿಸಲಿದ್ದು, ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com