ಕೋವಿಡ್-19 ಪರಿಣಾಮ, ವರ್ಷಗಳಲ್ಲೇ ಮೊದಲ ಬಾರಿಗೆ ಟಿಬಿ ಪ್ರಕರಣಗಳು ಹೆಚ್ಚಳ: ಡಬ್ಲ್ಯುಹೆಚ್ಒ 

ಜಾಗತಿಕವಾಗಿ ಕ್ಷಯರೋಗದ ಸಂಖ್ಯೆ ವರ್ಷಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಔಷಧಗಳಿಗೆ ನಿರೋಧಕವಾಗಿರುವ ಕ್ಷಯರೋಗ ಹೆಚ್ಚಳವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಿದೆ. 
ಟಿಬಿ ಪ್ರಕರಣಗಳು ಹೆಚ್ಚಳ (ಸಂಗ್ರಹ ಚಿತ್ರ)
ಟಿಬಿ ಪ್ರಕರಣಗಳು ಹೆಚ್ಚಳ (ಸಂಗ್ರಹ ಚಿತ್ರ)
Updated on

ಜೆನೀವಾ:ಜಾಗತಿಕವಾಗಿ ಕ್ಷಯರೋಗದ ಸಂಖ್ಯೆ ವರ್ಷಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. ಔಷಧಗಳಿಗೆ ನಿರೋಧಕವಾಗಿರುವ ಕ್ಷಯರೋಗ ಹೆಚ್ಚಳವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಿದೆ. 

ಡಬ್ಲ್ಯುಹೆಚ್ಒ ಪ್ರಕಾರ, 2021 ರಲ್ಲಿ ಜಾಗತಿಕ ಮಟ್ಟದಲ್ಲಿ 10 ಮಿಲಿಯನ್ ಮಂದಿ ಕ್ಷಯರೋಗ ಎದುರಿಸಿದ್ದರು, ಇದು ಆ ವರ್ಷದ ಹಿಂದಿನ ವರ್ಷಕ್ಕಿಂತಲೂ ಶೇ.4.5 ರಷ್ಟು ಹೆಚ್ಚಳವಾಗಿತ್ತು ಅಷ್ಟೇ ಅಲ್ಲದೇ ಆ ವರ್ಷ 1.6 ಮಿಲಿಯನ್ ಮಂದಿ ಸಾವನ್ನಪ್ಪಿದ್ದರು ಎಂದು ಡಬ್ಲ್ಯುಹೆಚ್ಒ ಹೇಳಿದೆ. 

450,000 ಪ್ರಕರಣಗಳು ಔಷಧ ನಿರೋಧಕ ಟಿಬಿ ಸೋಂಕಿತರಾಗಿದ್ದರು ಈ ಸಂಖ್ಯೆ 2020 ಕ್ಕಿಂತಲೂ ಶೇ.3 ರಷ್ಟು ಹೆಚ್ಚಳವಾಗಿದೆ.

ಲಾಭರಹಿತ ಟಿಬಿ ಅಲೈಯನ್ಸ್ ನ ಅಧ್ಯಕ್ಷ ಡಾ. ಮೆಲ್ ಸ್ಪಿಗೆಲ್ಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿಡ್-19 ಎದುರಾದಾಗಿನಿಂದ ಟಿ.ಬಿ ತಡೆಯಲ್ಲಿ ಕಳೆದ ಒಂದು ದಶಕದಲ್ಲಿ ಆಗಿದ್ದ ಪ್ರಗತಿ ಮತ್ತೆ ಹಿಂದಕ್ಕೆ ಹೋದಂತಾಗಿದೆ ಎಂದು ಹೇಳಿದ್ದಾರೆ. 

ತಡೆಗಟ್ಟುವ ಥೆರೆಪಿ ಸೇರಿದಂತೆ ಕೆಲವು ವಿಷಯಗಳಲ್ಲಿ ಲಾಭಗಳು ಕಂಡುಬರುತ್ತಿದ್ದರೂ ಟಿಬಿಗೆ ಸಂಬಂಧಿಸಿದ ಪ್ರತಿಯೊಂದು ಪ್ರತಿಜ್ಞೆ ಮತ್ತು ಗುರಿಯ ವಿಷಯದಲ್ಲಿ ಹಿಂದುಳಿದಿದ್ದೇವೆ ಎಂದು ಸ್ಪಿಗೆಲ್ಮನ್ ಹೇಳಿದ್ದಾರೆ. 

ಟಿಬಿ ಪ್ರಕರಣಗಳ ಹೆಚ್ಚಳಕ್ಕೆ ಕೋವಿಡ್-19 ಸಹ ಕಾರಣವಾಗಿದೆ ಎಂದು ಡಬ್ಲ್ಯುಹೆಚ್ಒ ಹೇಳಿದ್ದು, ಪ್ಯಾಂಡಮಿಕ್ ನಿಂದಾಗಿ ಟಿಬಿ ರೋಗನಿರ್ಣಯ ಮತ್ತು ಚಿಕಿತ್ಸೆಗೂ ಅಡ್ಡಿ ಉಂಟಾಗುತ್ತಿದೆ ಎಂದು ಹೇಳಿದೆ.
 
ಕೆಲವು ಮಂದಿಗೆ ಟಿಬಿ ರೋಗನಿರ್ಣಯವಾಗುತ್ತಿದ್ದರೆ, ತೀವ್ರವಾದ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚು ರೋಗಿಗಳು ಕ್ಷಯರೋಗವನ್ನು ಹರಡುತ್ತಿದ್ದಾರೆ ಇದರಿಂದ ದುರ್ಬಲ ಆರೋಗ್ಯ ವ್ಯವಸ್ಥೆ ಇರುವ ರಾಷ್ಟ್ರಗಳಲ್ಲಿ ಪ್ರಕರಣಗಳು ಉಲ್ಬಣವಾಗುತ್ತಿವೆ ಎಂದು ಡಬ್ಲ್ಯುಹೆಚ್ಒ ಹೇಳಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com