'ಆಟೋ ಪೈಲಟ್' ಅಡಚಣೆಯಿಂದ ಮಾರ್ಗ ಮಧ್ಯದಲ್ಲೇ ವಾಪಸ್ಸಾದ ದೆಹಲಿ-ನಾಸಿಕ್ ಸ್ಪೈಸ್ ಜೆಟ್ ವಿಮಾನ

ಇಂದು ಗುರುವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು 'ಆಟೋಪೈಲಟ್' ಅಡಚಣೆಯಿಂದ ನಗರಕ್ಕೆ ಮಧ್ಯದಲ್ಲಿ ಮರಳಿದ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇಂದು ಗುರುವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್‌ಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು 'ಆಟೋಪೈಲಟ್' ಅಡಚಣೆಯಿಂದ ನಗರಕ್ಕೆ ಮಧ್ಯದಲ್ಲಿ ಮರಳಿದ ಘಟನೆ ನಡೆದಿದೆ. 

ಬೋಯಿಂಗ್ 737 ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪೈಸ್‌ಜೆಟ್ ಬಿ737 ವಿಮಾನ ವಿಟಿ-ಎಸ್‌ಎಲ್‌ಪಿ, ಆಪರೇಟಿಂಗ್ ಫ್ಲೈಟ್ ಎಸ್‌ಜಿ-8363 (ದೆಹಲಿ-ನಾಸಿಕ್) ಆಟೋಪೈಲಟ್ ಅಡ್ಡಿಯಿಂದಾಗಿ ಏರ್ ಟರ್ನ್‌ಬ್ಯಾಕ್‌ ಪಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಇಂಧನ ಬೆಲೆಗಳು ಮತ್ತು ರೂಪಾಯಿ ಮೌಲ್ಯ ಕುಸಿತದ ನಡುವೆ ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಸ್ಪೈಸ್‌ಜೆಟ್ ವಿಮಾನ ಈ ಹಿಂದೆಯೂ ಇದೇ ರೀತಿ ಹಾರಾಟಕ್ಕೆ ಅಡ್ಡಿ ಎದುರಿಸಿತ್ತು, ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಿಮಾನಯಾನ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು.

ಕಳೆದ ಜುಲೈ 27 ರಂದು, ವಿಮಾನಯಾನ ಸುರಕ್ಷತಾ ನಿಯಂತ್ರಕವು ತನ್ನ ಗರಿಷ್ಠ ಶೇಕಡಾ 50ರಷ್ಟು ವಿಮಾನಗಳನ್ನು ಎಂಟು ವಾರಗಳವರೆಗೆ ನಿರ್ವಹಿಸುವಂತೆ ಏರ್‌ಲೈನ್‌ಗೆ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com