ರಾಜ್ಯವಾರು ಆಹಾರ ಮಳಿಗೆಗಳು, ಪರಿಷ್ಕರಿಸಿದ ಪಾದಚಾರಿ ಮಾರ್ಗ: ಪ್ರವಾಸಿಗರ ಸ್ವಾಗತಕ್ಕೆ ಸೆಂಟ್ರಲ್ ವಿಸ್ತಾ ಅವೆನ್ಯೂ ಸಿದ್ಧ
ನವದೆಹಲಿ: ರಾಜಪಥದ ಉದ್ದಕ್ಕೂ ಪರಿಷ್ಕರಿಸಿದ ಸೆಂಟ್ರಲ್ ವಿಸ್ತಾ ಅವೆನ್ಯೂ ಪ್ರವಾಸಿಗರ ಸ್ವಾಗತಕ್ಕೆ ಸಿದ್ಧವಾಗಿದ್ದು, ರಾಜ್ಯವಾರು ಆಹಾರ ಮಳಿಗೆಗಳು, ಕೆಂಪು ಗ್ರಾನೈಟ್ ನಿಂದ ನಿರ್ಮಿಸಿದ ಪಾದಚಾರಿ ಮಾರ್ಗ, ಮಾರಾಟ ವಲಯಗಳು, ವಾಹನ ನಿಲುಗಡೆ ಸ್ಥಳಗಳು ಮತ್ತು ರಾತ್ರಿಯಿಡೀ ಭದ್ರತೆಯನ್ನು ಹೊಂದಿರಲಿದೆ. ಆದರೆ ಇಂಡಿಯಾ ಗೇಟ್‌ನಿಂದ ಮಾನ್ ಸಿಂಗ್ ರಸ್ತೆವರೆಗಿನ ಉದ್ಯಾನ ಪ್ರದೇಶದಲ್ಲಿ ತಿಂಡಿ, ತಿನಿಸುಗಳಿಗೆ ಅನುಮತಿ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯ ಮೊದಲ ಕಾಮಗಾರಿ ಇದಾಗಿದ್ದು, ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ಸಂಪೂರ್ಣ ಮಾರ್ಗವನ್ನುಸೆಪ್ಟೆಂಬರ್ 8 ರಂದು ಸಂಜೆ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
20 ತಿಂಗಳ ನಂತರ ಈ ರಸ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ. ಉದ್ಘಾಟನೆಯ ದಿನದಂದು, ಇಂಡಿಯಾ ಗೇಟ್‌ನಿಂದ ಮಾನ್ ಸಿಂಗ್ ರಸ್ತೆಯವರೆಗೆ ಸಾರ್ವಜನಿಕರಿಗೆ ಅನುಮತಿ ಇಲ್ಲ, ಆದರೆ ಸೆಪ್ಟೆಂಬರ್ 9 ರಿಂದ, ಸಂಪೂರ್ಣ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ.
ಪಾದಚಾರಿಗಳಿಗೆ ಅನುಕೂಲವಾಗುವಂತೆ ನಾಲ್ಕು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಇಡೀ ಆವರಣದಲ್ಲಿ 422 ಕೆಂಪು ಗ್ರಾನೈಟ್ ನ ಆಸನಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ