ಸೆಪ್ಟೆಂಬರ್ 14 ಹಿಂದಿ ದಿವಸ್ ಆಚರಣೆ: ಹಿಂದಿ ಭಾಷೆ ಭಾರತಕ್ಕೆ ವಿಶೇಷ ಗೌರವ ತಂದಿದೆ ಎಂದ ಪ್ರಧಾನಿ ಮೋದಿ

ದೇಶಾದ್ಯಂತ ಇಂದು ಬುಧವಾರ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದಿ ದಿನದ ಪ್ರಾಮುಖ್ಯತೆ, ಹಿಂದಿ ಭಾಷೆ, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಒತ್ತು ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬರೆದುಕೊಂಡಿದ್ದಾರೆ.
ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಸಂಗ್ರಹ ಚಿತ್ರ
ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಸಂಗ್ರಹ ಚಿತ್ರ

ನವದೆಹಲಿ: ದೇಶಾದ್ಯಂತ ಇಂದು ಬುಧವಾರ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದಿ ದಿನದ ಪ್ರಾಮುಖ್ಯತೆ, ಹಿಂದಿ ಭಾಷೆ, ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಒತ್ತು ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ಪ್ರಪಂಚದಾದ್ಯಂತ ಹಿಂದಿ ಭಾಷೆ, ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ. ಅದರ ಸರಳತೆ, ಸ್ವಾಭಾವಿಕತೆ ಮತ್ತು ಸೂಕ್ಷ್ಮತೆಯು ಯಾವಾಗಲೂ ಆಕರ್ಷಿಸುತ್ತದೆ. ಹಿಂದಿ ದಿವಸವಾದ ಇಂದು, ಅದನ್ನು ಸಮೃದ್ಧವಾಗಿ ಮತ್ತು ಸಬಲೀಕರಣಗೊಳಿಸಲು ದಣಿವರಿಯಿಲ್ಲದೆ ಕೊಡುಗೆ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. 

ಹಿಂದಿ ಭಾಷೆ ಭಾರತದ ಎಲ್ಲಾ ಭಾಷೆಗಳ ಸ್ನೇಹಿಯಾಗಿದ್ದು ಅಧಿಕೃತ ಭಾಷೆಯಾಗಿ ಐಕ್ಯತೆಯ ನೂಲಿನಲ್ಲಿ ಇಡೀ ದೇಶವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿಯ ಜೊತೆಗೆ ಎಲ್ಲಾ ಸ್ಥಳೀಯ ಭಾಷೆಗಳು ಸಮನಾಗಿ ಬೆಳವಣಿಗೆಯಾಗಬೇಕು ಎಂದಿದ್ದಾರೆ. 

ಪ್ರತಿ ವರ್ಷ ಸೆಪ್ಟೆಂಬರ್ 14ನ್ನು ಹಿಂದಿ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕೃತ ಭಾಷೆ ಎಂದು ಹಿಂದಿಯನ್ನು ಘೋಷಿಸಿದ ನಂತರ ಇಂದಿನ ದಿನವನ್ನು ಹಿಂದಿ ಭಾಷಾ ದಿನ ಎಂದು ಅರ್ಪಿಸಲಾಗಿದೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರು ಸೆಪ್ಟೆಂಬರ್ 14ನ್ನು ಹಿಂದಿ ದಿನ ಎಂದು ಘೋಷಿಸಿದರು. 

ದೇವನಗರಿ ಲಿಪಿಯಲ್ಲಿ ಬರೆದಿರುವ ಹಿಂದಿಯನ್ನು ಸಂಯುಕ್ತ ಭಾರತದ ಅಧಿಕೃತ ಭಾಷೆಯೆಂದು ಸೆಪ್ಟೆಂಬರ್ 14, 1949ರಲ್ಲಿ ಘೋಷಿಸಿ ಇಂಗ್ಲಿಷ್ ಭಾಷೆಯನ್ನು ಎರಡನೇ ಅಧಿಕೃತ ಭಾಷೆಯೆಂದು ಘೋಷಿಸಲಾಯಿತು. 

ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯೆಂದು ಭಾರತದಲ್ಲಿ ಸಂವಿಧಾನ 1950, ಜನವರಿ 26ರಂದು ಕಾನೂನುಬದ್ಧಗೊಳಿಸಿತು. ಬಹುಭಾಷೀಯ ದೇಶವಾದ ಭಾರತದಲ್ಲಿ ಸರ್ಕಾರದ ಕೆಲಸ ಕಾರ್ಯಗಳಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತಿದೆ. 

258 ಮಿಲಿಯನ್ ಜನರು ಮಾತನಾಡುತ್ತಿರುವ ಭಾಷೆಯಾದ ಹಿಂದಿ ಪ್ರಪಂಚದಲ್ಲಿ ಅತಿಹೆಚ್ಚು ಜನರು ಮಾತನಾಡುತ್ತಿರುವ ನಾಲ್ಕನೇ ಭಾಷೆ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com