ಖ್ಯಾತ ಗಾಯಕ  ಜಸ್ಟಿನ್ ಬೀಬರ್‌ 'ಇಂಡಿಯಾ ಶೋ' ರದ್ದು

ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ತನ್ನ ಅನಾರೋಗ್ಯದ ಕಾರಣದಿಂದ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಪ್ರವರ್ತಕರಾದ ಬುಕ್‌ ಮೈಶೋ ಗುರುವಾರ ತಿಳಿಸಿದೆ. ತನ್ನ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂದು ಬೀಬರ್‌ ಹೇಳಿಕೊಂಡ ಮೂರು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. 
ಜಸ್ಟಿನ್ ಬೀಬರ್
ಜಸ್ಟಿನ್ ಬೀಬರ್
Updated on

ನವದೆಹಲಿ: ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ತನ್ನ ಅನಾರೋಗ್ಯದ ಕಾರಣದಿಂದ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಪ್ರವರ್ತಕರಾದ ಬುಕ್‌ ಮೈಶೋ ಗುರುವಾರ ತಿಳಿಸಿದೆ. ತನ್ನ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂದು ಬೀಬರ್‌ ಹೇಳಿಕೊಂಡ ಮೂರು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. 

'ಜಸ್ಟೀಸ್ ವರ್ಲ್ಡ್ ಟೂರ್' ಭಾಗವಾಗಿ ಅಕ್ಟೋಬರ್ 18 ರಂದು ನವದೆಹಲಿಯಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದ 28 ವರ್ಷದ ಗ್ರ್ಯಾಮಿ ವಿಜೇತ, ಜೂನ್ 15 ರಂದು ಅನಾರೋಗ್ಯದ ಕಾರಣ ತಮ್ಮ ವಿಶ್ವ ಪ್ರವಾಸಕ್ಕೆ ವಿರಾಮ ನೀಡುತ್ತಿರುವುದಾಗಿ ಹೇಳಿದ್ದರು.

"ಆರೋಗ್ಯದ ಕಾಳಜಿಯಿಂದಾಗಿ, ದುರದೃಷ್ಟವಶಾತ್ ಅವರು ಮುಂದಿನ ತಿಂಗಳು ಜವಹರ್ ಲಾಲ್ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಲಾಗಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಸ್ಟಿನ್ ಬೀಬರ್ ಅವರ ಭಾರತ ಪ್ರವಾಸ ರದ್ದುಗೊಂಡಿರುವುದರಿಂದ ಕಂಪನಿಯು ಟಿಕೆಟ್ ಮೊತ್ತವನ್ನು ಜನರಿಗೆ ಮರುಪಾವತಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಬುಕ್ ಮೈ ಶೋ ಈಗಾಗಲೇ ಪ್ರದರ್ಶನಕ್ಕಾಗಿ ಟಿಕೆಟ್‌ಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ  ಮರುಪಾವತಿಯನ್ನು ಪ್ರಾರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com