'ಹೈದರಾಬಾದ್ ವಿಮೋಚನಾ ದಿನಾಚರಣೆ ಆಚರಿಸದವರು ದೇಶ ದ್ರೋಹಿಗಳು': ಅಮಿತ್ ಶಾ

ತೆಲಂಗಾಣ ವಿಮೋಚನಾ ದಿನವನ್ನು ಆಚರಿಸದವರಿಗೆ ನೇರವಾಗಿ ಪ್ರತ್ಯುತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ವಿಮೋಚನಾ ದಿನಾಚರಣೆಯ ಹೆಸರನ್ನು ಬದಲಾಯಿಸುವ ಮೂಲಕ ಅವರ ಮನಸ್ಸಿನಲ್ಲಿರುವ...
ಅಮಿತ್ ಶಾ
ಅಮಿತ್ ಶಾ

ಹೈದರಾಬಾದ್: ತೆಲಂಗಾಣ ವಿಮೋಚನಾ ದಿನವನ್ನು ಆಚರಿಸದವರಿಗೆ ನೇರವಾಗಿ ಪ್ರತ್ಯುತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ವಿಮೋಚನಾ ದಿನಾಚರಣೆಯ ಹೆಸರನ್ನು ಬದಲಾಯಿಸುವ ಮೂಲಕ ಅವರ ಮನಸ್ಸಿನಲ್ಲಿರುವ ರಜಾಕರ(ಎಂಐಎಂ) ಭಯ ತೆಗೆದುಹಾಕುವಂತೆ ಶನಿವಾರ ಹೇಳಿದ್ದಾರೆ. 

ಸ್ವಾತಂತ್ರ್ಯದ 75 ವರ್ಷಗಳ ನಂತರ, ರಜಾಕರು ಇನ್ನುಮುಂದೆ ರಾಜ್ಯದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

ತೆಲಂಗಾಣ ವಿಮೋಚನಾ ದಿನಾಚರಣೆ ಪ್ರಯುಕ್ತ ಇಂದು ಪರೇಡ್ ಮೈದಾನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸೆಪ್ಟೆಂಬರ್ 17 ಅನ್ನು ವಿಮೋಚನಾ ದಿನವನ್ನಾಗಿ ಆಚರಿಸಲು ನಾಚಿಕೆಪಡುವವರು, ಸಾವಿರಾರು ಜನ ತಮ್ಮ ಪ್ರಾಣವನ್ನು ಅರ್ಪಿಸಿದ ವಿಮೋಚನಾ ಹೋರಾಟದ ದ್ರೋಹಿಗಳಾಗಿ ಉಳಿಯುತ್ತಾರೆ ಎಂದು ಎಚ್ಚರಿಸಿದರು.

ಕಳೆದ 74 ವರ್ಷಗಳಿಂದ ಈ ಸಮಾರಂಭವನ್ನು ಆಚರಿಸಲು ರಾಜಕೀಯ ಪಕ್ಷಗಳಿಗೆ ತಾಕತ್ತು ಇಲ್ಲದಿರುವುದು ದುರದೃಷ್ಟಕರ ಎಂದು ಹೇಳಿದ ಶಾ, ಈ ದಿನವನ್ನು ಆಚರಿಸದವರು ದೇಶ ದ್ರೋಹಿಗಳು. ಅವರನ್ನು ಮರೆಯಬಾರದು ಎಂದು ಜನರಿಗೆ ಕರೆ ನೀಡಿದರು.

ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಆ ದಿನವನ್ನು ವಿಮೋಚನಾ ದಿನವನ್ನಾಗಿ ಆಚರಿಸುವುದಾಗಿ ಅವರು (ಟಿಆರ್‌ಎಸ್) ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ, ರಜಾಕರ(ಎಂಐಎಂ) ಭಯದಿಂದ ಅವರು ಯು-ಟರ್ನ್ ಹೊಡೆದರು. ಈಗ ಪ್ರಧಾನಿ ಮೋದಿ ಅಧಿಕೃತವಾಗಿ ಸಮಾರಂಭವನ್ನು ಘೋಷಿಸಿದ ನಂತರ, ಎಲ್ಲರೂ ಆಚರಣೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಅಮಿತ್ ಶಾ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com