ಕಾಶ್ಮೀರದಲ್ಲಿ 30 ವರ್ಷಗಳ ನಂತರ ಚಿತ್ರಮಂದಿರಗಳು ಪುನರ್ ಆರಂಭ

ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ 30 ವರ್ಷಗಳ ನಂತರ ಸಿನಿಮಾ ಹಾಲ್ ಪುನರ್ ಆರಂಭವಾಗುತ್ತಿವೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಬಾಲಿವುಡ್ ಚಿತ್ರ ನೋಡಲು ಕಣಿವೆ ಪ್ರದೇಶದಿಂದ ಹೊರ ಹೋಗುವುದು ತಪ್ಪಿದಂತಾಗುತ್ತದೆ ಎಂದು ಸೊನಾವಾರದ ಮೊದಲ ಮಲ್ಟಿಪ್ಲೆಕ್ಸ್ ಓಪನಿಂಗ್ ಗಾಗಿ ಕಾಯುತ್ತಿರುವ ಆಕಿಬ್ ಭಟ್ ಹೇಳಿದರು.
ಕಾಶ್ಮೀರದಲ್ಲಿನ ಮಲ್ಪಿಪ್ಲೆಕ್ಸ್ ಚಿತ್ರ
ಕಾಶ್ಮೀರದಲ್ಲಿನ ಮಲ್ಪಿಪ್ಲೆಕ್ಸ್ ಚಿತ್ರ

ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ 30 ವರ್ಷಗಳ ನಂತರ ಸಿನಿಮಾ ಹಾಲ್ ಪುನರ್ ಆರಂಭವಾಗುತ್ತಿವೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಬಾಲಿವುಡ್ ಚಿತ್ರ ನೋಡಲು ಕಣಿವೆ ಪ್ರದೇಶದಿಂದ ಹೊರ ಹೋಗುವುದು ತಪ್ಪಿದಂತಾಗುತ್ತದೆ ಎಂದು ಸೊನಾವಾರದ ಮೊದಲ ಮಲ್ಟಿಪ್ಲೆಕ್ಸ್ ಓಪನಿಂಗ್ ಗಾಗಿ ಕಾಯುತ್ತಿರುವ ಆಕಿಬ್ ಭಟ್ ಹೇಳಿದರು.

ಹೊಸದಾಗಿ ಬಿಡುಗಡೆಯಾದ ಹಿಂದಿ ಚಿತ್ರ ನೋಡಲು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ದೆಹಲಿ ಅಥವಾ ಜಮ್ಮು ನಗರಕ್ಕೆ ಹೋಗುತ್ತಿದ್ದೆ. ಎಲ್ಲಾ ಚಿತ್ರಗಳು ವಿವಿಧ ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿ ನೋಡಿದರೂ ದೊಡ್ಡ ಪರದೆಯಲ್ಲಿ ನೋಡಿದ ಅನುಭವ ಆಗಲ್ಲ ಎಂದು ಭಟ್ ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರದರ್ಶನದೊದಿಗೆ ಕಾಶ್ಮೀರದಲ್ಲಿ ಮೊದಲ ಮಲ್ಟಿಪ್ಲೆಕ್ಸ್  ನಾಳೆಯಿಂದ ಆರಂಭವಾಗಲಿದೆ. ಹೃತಿಕ್ ರೋಷನ್ ಮತ್ತು ಸೈಫ್ ಆಲಿಖಾನ್ ಅಭಿನಯದ 'ವಿಕ್ರಮ್ ವೇದಾ' ಚಿತ್ರ ಪ್ರದರ್ಶನದೊಂದಿಗೆ ಸೆಪ್ಟೆಂಬರ್ 30 ರಿಂದ ನಿರಂತರವಾಗಿ ಶೋಗಳು ಆರಂಭವಾಗಲಿವೆ ಎಂದು ಧಾರ್ ತಿಳಿಸಿದ್ದಾರೆ. 

ಕಾಶ್ಮೀರದಲ್ಲಿ ಮೊದಲ ಮಲ್ಟಿಪ್ಲೆಕ್ಸ್ ನಲ್ಲಿ 520 ಆಸನ ಸಾಮರ್ಥ್ಯದ ಮೂರು ಚಿತ್ರಮಂದಿರಗಳು ಇರಲಿವೆ. ಆವರಣದಲ್ಲಿ ಸ್ಥಳೀಯ ಆಹಾರ ಪ್ರೋತ್ಸಾಹ ನಿಟ್ಟಿನಲ್ಲಿ ಫುಡ್ ಕೋರ್ಟ್ ಕೂಡಾ ಓಪನ್ ಆಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ತಲಾ ಒಂದರಂತೆ ಮಲ್ಪಿಪ್ಲೆಕ್ಸ್  ಸಿನಿಮಾ ಹಾಲ್‌ಗಳನ್ನು ಉದ್ಘಾಟಿಸಿದ ಬೆನ್ನಲ್ಲೇ, ಐನಾಕ್ಸ್ ನಿಂದ ನಿರ್ವಹಿಸಲ್ಪಡುವ ಸೊನಾವಾರ್ ಪ್ರದೇಶದ ಮಲ್ಟಿಪ್ಲೆಕ್ಸ್‌ ಉದ್ಘಾಟಿಸಲಿದ್ದಾರೆ. 

1989-90ರಲ್ಲಿ ಉಗ್ರಗಾಮಿಗಳ ಬೆದರಿಕೆ ಮತ್ತು ದಾಳಿಯಿಂದಾಗಿ ಕಣಿವೆ ಪ್ರದೇಶದಲ್ಲಿ  ಥಿಯೇಟರ್ ಮಾಲೀಕರು ಚಿತ್ರಮಂದಿರಗಳ ಬಾಗಿಲು ಮುಚ್ಚಿದ್ದರು. ಮೂರು ದಶಕಗಳ ನಂತರ ಕಣಿವೆಯಲ್ಲಿ ಚಿತ್ರಮಂದಿರಗಳು ಮತ್ತೆ ತೆರೆಯಲ್ಪಡುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಇಂತಹ ಸಿನಿಮಾ ಮಂದಿರ ನಿರ್ಮಿಸುತ್ತೇವೆ ಎಂದು ಸಿನ್ಹಾ ಹೇಳಿದ್ದಾರೆ. ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್‌ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿಯಲ್ಲಿ ಚಿತ್ರಮಂದಿರಗಳು ಶೀಘ್ರದಲ್ಲೇ ಉದ್ಘಾಟನೆಯಾಗಲಿವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com