ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ 'ರಾಷ್ಟ್ರಪಿತ': ಇಮಾಮ್ ಸಂಘದ ಮುಖ್ಯಸ್ಥ
ನವದೆಹಲಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರಾಷ್ಟ್ರಪಿತ ಎಂದು ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಬಣ್ಣಿಸಿದ್ದಾರೆ.
ಮೋಹನ್ ಭಾಗವತ್ ಜೊತೆಗಿನ ಭೇಟಿ ಕುರಿತಂತೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ತಮ್ಮ ಆಹ್ವಾನದ ಮೇರೆಗೆ ಮೋಹನ್ ಭಾಗವತ್ ಮದರಾಸವೊಂದಕ್ಕೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅವರು ರಾಷ್ಟ್ರಪಿತ, ರಾಷ್ಟ್ರ ಮೊದಲು ಎಂಬುದರಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ನಮ್ಮ ಡಿಎನ್ ಎ ಕೂಡಾ ಒಂದೇ ಆಗಿದೆ. ಆದರೆ, ನಾವು ಪೂಜೆ ಮಾಡುವ ವಿಧಾನ ಮಾತ್ರ ಬೇರೆ ಬೇರೆ ಎಂದಿದ್ದಾರೆ.
ಮೋಹನ್ ಭಾಗವತ್ ಅವರಿಂದು ಸಂಘದ ಹಿರಿಯ ಪದಾಧಿಕಾರಿಗಳೊಂದಿಗೆ ಮಸೀದಿಯೊಂದಕ್ಕೆ ತೆರಳಿ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಕಸ್ತೂರ ಬಾ ಗಾಂಧಿ ಮಾರ್ಗದಲ್ಲಿನ
ಮಸೀದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ವಿಚಾರಗಳು ಕುರಿತಂತೆ ಚರ್ಚೆ ನಡೆಸಿದರು.
ಸಭೆಯ ವಿವರಗಳನ್ನು ಹಂಚಿಕೊಂಡಿರುವ ಇಲ್ಯಾಸಿ ಸಹೋದರ ಸುಹೈಲ್ ಇಲ್ಯಾಸಿ, ನಮ್ಮ ತಂದೆಯ ಪುಣ್ಯ ಸ್ಮರಣೆ ಸಂದರ್ಭದಲ್ಲಿ ತಮ್ಮ ಆಹ್ವಾನದ ಮೇರೆಗೆ ಭಾಗವತ್ ಬಂದದ್ದು, ಪ್ರಮುಖ ವಿಚಾರವಾಗಿದೆ. ಅಲ್ಲದೇ ಇದು ದೇಶಕ್ಕೆ ಒಳ್ಳೆಯ ಸಂದೇಶ ಕಳುಹಿಸಲಿದೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ