ಮುಂಬೈ: ನವರಾತ್ರಿಯ ಹಿನ್ನೆಲೆಯಲ್ಲಿ ಬ್ರಹ್ಮಾಸ್ತ್ರ ಭಾಗ 1: ಶಿವ ಸಿನಿಮಾದ ಟಿಕೆಟ್ ದರಗಳನ್ನು ಕಡಿತಗೊಳಿಸಲಾಗಿದೆ.
ಸಿನಿಮಾ ನಿರ್ದೇಶಕ ಅಯಾನ್ ಮುಖರ್ಜಿ ಈ ಘೋಷಣೆಯನ್ನು ಭಾನುವಾರ ಪ್ರಕಟಿಸಿದ್ದು, ಮುಂದಿನ 4 ದಿನಗಳ ಕಾಲ ಪ್ರತಿ ಟಿಕೆಟ್ ಬೆಲೆಯನ್ನು 100 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ಸ್ಟಾ ಗ್ರಾಮ್ ಪೋಸ್ಟ್ ನಲ್ಲಿ ಸಿನಿಮಾ ನಿರ್ದೇಶಕ ಈ ಮಾಹಿತಿ ಹಂಚಿಕೊಂಡಿದ್ದು, ಸೆ.23 ರಂದು ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಟಿಕೆಟ್ ದರವನ್ನು, 4,000 ಸ್ಕ್ರೀನ್ ಗಳಲ್ಲಿ 75 ರೂಪಾಯಿಗಳಿಗೆ ನಿಗದಿಪಡಿಸಲಾಗಿತ್ತು. ರಾಷ್ಟ್ರೀಯ ಸಿನಿಮಾದ ದಿನದ ಅಂಗವಾಗಿ ಟಿಕೆಟ್ ದರ ಕಡಿತಕ್ಕೆ ಅತ್ಯುತ್ತಮ ಜನಪ್ರಿಯತೆಯ ಹಿನ್ನೆಲೆಯಲ್ಲಿ ನವರಾತ್ರಿ ಅಂಗವಾಗಿ ಮತ್ತೆ ಸಿನಿಮಾ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ. ಸೆ.26 ರಿಂದ 29 ವರೆಗೆ ಬ್ರಹ್ಮಾಸ್ತ್ರ ಟಿಕೆಟ್ ದರ 100 ರೂಪಾಯಿಗಳಿಗೆ ನಿಗದಿಯಾಗಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.
Advertisement