68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಹಿರಿಯ ನಟಿ ಆಶಾ ಪರೇಖ್ ಅವರು ಶುಕ್ರವಾರ ಸಂಜೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಅತ್ಯುನ್ನತ ಚಲನಚಿತ್ರ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಆಶಾ ಪರೇಖ್
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಆಶಾ ಪರೇಖ್
Updated on

ನವದೆಹಲಿ: ಹಿರಿಯ ನಟಿ ಆಶಾ ಪರೇಖ್ ಅವರು ಶುಕ್ರವಾರ ಸಂಜೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ಅತ್ಯುನ್ನತ ಚಲನಚಿತ್ರ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.

79 ವರ್ಷ ವಯಸ್ಸಿನ ನಟಿಗೆ 2020 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 1952 ರ ಆಸ್ಮಾನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಬಾಲ ಕಲಾವಿದೆಯಾಗಿ ಪಾದಾರ್ಪಣೆ ಮಾಡಿದ ಆಶಾ ಪರೇಖ್, ದೋ ಬದನ್, ಉಪಕಾರ್ ಮತ್ತು ಕಾರವಾನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಭಾರತದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸೆನ್ಸಾರ್ ಬೋರ್ಡ್) ಯ ಮೊದಲ ಮಹಿಳಾ ಅಧ್ಯಕ್ಷೆ ಆಶಾ ಪರೇಖ್ ಅವರಿಗೆ ಭಾರತ ಸರ್ಕಾರವು 1992 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಆಶಾ ಪರೇಖ್ ಅವರ ಖ್ಯಾತ ಚಿತ್ರಗಳೆಂದರೆ ದಿಲ್ ದೇಕೆ ದೇಖೋ, ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ (1961), ಫಿರ್ ವೋಹಿ ದಿಲ್ ಲಯಾ ಹೂನ್ (1963), ತೀಸ್ರಿ ಮಂಜಿಲ್ (1966), ಬಹರೋನ್ ಕೆ ಸಪ್ನೆ (1967), ಪ್ಯಾರ್ ಕಾ ಮೌಸಮ್, ದೋ ಬದನ್ (1966) , ಚಿರಾಗ್ (1969) ಮತ್ತು ಮೈನ್ ತುಳಸಿ ತೇರೆ ಆಂಗನ್ ಕಿ ಸೇರಿದಂತೆ ಹಲವು. ಅವರು ಗುಜರಾತಿ, ಪಂಜಾಬಿ ಮತ್ತು ಕನ್ನಡ ಚಲನಚಿತ್ರಗಳು ಸೇರಿದಂತೆ ಭಾಷೆಗಳಾದ್ಯಂತ ಪ್ರಾದೇಶಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪಂಜಾಬಿ ಚಲನಚಿತ್ರವಾದ ಕಂಕನ್ ದೆ ಓಹ್ಲೆಯಲ್ಲಿ ಧರ್ಮೇಂದ್ರ, ಲಂಬಾರ್‌ದರ್ನಿ ಮತ್ತು ದಾರಾ ಸಿಂಗ್‌ ಜೊತೆ ನಟಿಸಿದ್ದರು.

ನಟಿಯಾಗಿ ಕೆಲಸ ಮಾಡುವುದರ ಜೊತೆಗೆ ಆಶಾ ಪರೇಖ್ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಆಶಾ ಪರೇಖ್ ಕೊನೆಯದಾಗಿ 1999 ರ ಚಲನಚಿತ್ರ ಸಾರ್ ಆಂಖೋನ್ ಪರ್ ನಲ್ಲಿ ಕಾಣಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com