ಜೈಪುರ: ರಾಜಸ್ಥಾನದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ರೋಗ ಲಕ್ಷಣವಿರುವ 20 ವರ್ಷದ ಯುವಕನನ್ನು ಜೈಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿಯ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿದೆ ಎಂದು ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೂಪರಿಂಟೆಂಡೆಂಟ್ ಡಾ. ಅಜಿತ್ ಸಿಂಗ್ ತಿಳಿಸಿದ್ದಾರೆ.
ಮಂಕಿಪಾಕ್ಸ್ ಪ್ರಕರಣಗಳಿಗಾಗಿ ತೆರೆಯಲಾಗಿರುವ ವಿಶೇಷ ವಾರ್ಡ್ ನಲ್ಲಿ ರೋಗಿಯನ್ನು ಅಬ್ಸರ್ವೇಷನ್ಗೆ ಇರಿಸಲಾಗಿದೆ. ಆತ ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ದೇಹದ ಮೇಲೆ ದದ್ದುಗಳಿವೆ ಎಂದು ಡಾ. ಸಿಂಗ್ ತಿಳಿಸಿದ್ದಾರೆ.
Advertisement