ಉಚ್ಛಾಟಿತ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದು ಮಹಿಳೆ ಆಕ್ರೋಶ, ವಿಡಿಯೋ ವೈರಲ್!
ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಂದು ಕೊಲ್ಕತ್ತ ಬಳಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ.
Published: 02nd August 2022 06:58 PM | Last Updated: 02nd August 2022 07:42 PM | A+A A-

ಪಾರ್ಥ ಚಟರ್ಜಿ
ಕೋಲ್ಕತ್ತಾ: ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಂದು ಕೊಲ್ಕತ್ತ ಬಳಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ.
ಸಚಿವರ ಮೇಲೆ ಯಾಕೆ ಚಪ್ಪಲಿ ಎಸೆದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳಿಗೆ ಉತ್ತರಿಸಿದ ಮಹಿಳೆ 'ನಿಮಗೆ ಗೊತ್ತಿಲ್ಲವೇ?, ಅವನು ಎಷ್ಟೋ ಬಡವರ ಹಣವನ್ನು ಲಪಟಾಯಿಸಿದ್ದಾನೆ. ಫ್ಲಾಟ್‌ಗಳನ್ನು ಖರೀದಿಸಿದ್ದಾನೆ, ಮತ್ತು ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ, ಅವನನ್ನು ಎಸಿ ಕಾರಿನಲ್ಲಿ ಸಾಗಿಸಲಾಗುತ್ತಿದೆ. ಅವನ ಕುತ್ತಿಗೆಗೆ ಹಗ್ಗವನ್ನು ಎಳೆದುಕೊಂಡು ಹೋಗಬೇಕು. ಅವನ ತಲೆಗೆ ಚಪ್ಪಲಿ ಬಡಿದರೆ ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಹೇಳಿದರು.
ಎಷ್ಟೋ ಜನರಿಗೆ ತಟ್ಟೆಯಲ್ಲಿ ಊಟವಿಲ್ಲ. ಇವರು ಕೆಲಸ ಕೊಡಿಸುವ ಭರವಸೆ ನೀಡಿ ಹಣ ತೆಗೆದುಕೊಂಡರು. ನಂತರ ಎಂಜಾಯ್ ಮಾಡಿ ಫ್ಲಾಟ್‌ಗಳನ್ನು ಖರೀದಿಸಿದರು. ಇದು ನನ್ನ ಕೋಪ ಮಾತ್ರವಲ್ಲ, ಪಶ್ಚಿಮ ಬಂಗಾಳದ ಲಕ್ಷ ಲಕ್ಷ ಜನರ ಕೋಪ ಎಂದು ಆಕ್ರೋಶ ಹೊರಹಾಕಿದರು.
ಚಪ್ಪಲಿ ಎಸೆದ ನಂತರ ತೃಣಮೂಲ ಕಾಂಗ್ರೆಸ್ ನಾಯಕನನ್ನು ತರಾತುರಿಯಲ್ಲಿ ಸುತ್ತುವರಿದು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಸುತ್ತ ಬಿಗಿ ಭದ್ರತೆಯ ನಡುವೆಯೂ ಈ ಘಟನೆ ನಡೆದಿದೆ.
ಇದನ್ನೂ ಓದಿ: ನಟಿ ಅರ್ಪಿತಾ ಮುಖರ್ಜಿ ಫ್ಲಾಟ್ ನಲ್ಲಿ ಸಿಕ್ಕಿದ್ದು ಕೋಟಿಗಟ್ಟಲೆ ಹಣ ಅಷ್ಟೇ ಅಲ್ಲ, ತರಾವರಿ ಲೈಂಗಿಕ ಆಟಿಕೆಗಳು!
ಅರ್ಪಿತಾ ಮುಖರ್ಜಿಗೆ ಸೇರಿದ ಫ್ಲಾಟ್‌ಗಳಿಂದ ಅಪಾರ ಪ್ರಮಾಣದ ನಗದು ಮತ್ತು ಕೆಜಿಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡ ನಂತರ ಈ ಪ್ರಕರಣ ದೇಶಾದ್ಯಂತ ಗಮನ ಸೆಳೆದಿದೆ.
ತೃಣಮೂಲದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಹಾಯಕರಲ್ಲಿ ಒಬ್ಬರಾದ ಪಾರ್ಥ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ನಡೆಸಿದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಜುಲೈ 23ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.
ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಫ್ಲಾಟ್‌ಗಳಿಂದ ಸುಮಾರು 50 ಕೋಟಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ.
This woman, who hurled a slipper at Partha Chatterjee, symbol of Mamata Banerjee’s venal establishment, and walked back barefoot is the symbol of Bengal’s resistance against TMC’s oppressive regime. She is মহিষাসুরমর্দিনী in the true sense, who will bring down Mamata Banerjee… pic.twitter.com/nmfGWRiAiv
— Amit Malviya (@amitmalviya) August 2, 2022