"ಮಹಾ ಅಪಾಯಕಾರಿ ಇಸ್ಲಾಮಿಕ್ ತೀವ್ರವಾದ"ವನ್ನು ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ ರಿಷಿ ಸುನಕ್!

ಬ್ರಿಟನ್ ಪ್ರಧಾನಿ ಅಭ್ಯರ್ಥಿಯಾಗಿರುವ ರಿಷಿ ಸುನಕ್, ಇಸ್ಲಾಮಿಕ್ ತೀವ್ರವಾದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದನ್ನು ಮಹಾ ಅಪಾಯಕಾರಿ ಎಂದು ಹೇಳಿದ್ದಾರೆ. 
ರಿಷಿ ಸುನಕ್
ರಿಷಿ ಸುನಕ್

ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿಯಾಗಿರುವ ರಿಷಿ ಸುನಕ್, ಇಸ್ಲಾಮಿಕ್ ತೀವ್ರವಾದದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದನ್ನು ಮಹಾ ಅಪಾಯಕಾರಿ ಎಂದು ಹೇಳಿದ್ದಾರೆ. 

ಬ್ರಿಟನ್ ನಲ್ಲಿರುವ ಭಯೋತ್ಪಾದನೆ ನಿಗ್ರಹ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ಮಾತನ್ನಾಡಿರುವ ರಿಷಿ ಸುನಕ್, ಇಸ್ಲಾಮಿಕ್ ತೀವ್ರವಾದದ ಹೆಡೆಮುರಿಕಟ್ಟುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಬ್ರಿಟನ್ ಅಭ್ಯರ್ಥಿ ಚುನಾವಣೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಬ್ರಿಟನ್ ನಲ್ಲಿ ತೀವ್ರವಾದವನ್ನು ಉತ್ತೇಜಿಸುವ ಸಂಘಟನೆಗಳನ್ನು ನಿಗ್ರಹಿಸುವುದಾಗಿ ಹೇಳಿದ್ದಾರೆ.
 
"ಒಬ್ಬ ಪ್ರಧಾನಿಗೆ ದೇಶ ಹಾಗೂ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುವುದಕ್ಕಿಂತಲೂ ಮುಖ್ಯವಾದ ಕೆಲಸ ಮತ್ತೊಂದಿಲ್ಲ" ಎಂದು ಸುನಕ್ ಚುನಾವನಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com