ದೆಹಲಿ: ಆರೋಗ್ಯ ಸೇವೆಗೆ ಒತ್ತಾಯಿಸಿ 82 ವರ್ಷದ ವೃದ್ಧೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಆರೋಗ್ಯ ಸೇವೆ ನೀಡುವಂತೆ ಒತ್ತಾಯಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ 82 ವರ್ಷದ ದಯಾಬಾಯಿ ಅವರು ಕೇರಳದ ಸೆಕ್ರೆಟರಿಯೇಟ್ ಎದುರು ನಾಳೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ನಮ್ಮ ಬೇಡಿಕೆಗಳು ವಿಶೇಷವೇನೂ ಅಲ್ಲ. ಆರೋಗ್ಯ ರಕ್ಷಣೆ ಜೀವನದ ಹಕ್ಕು. ಇದು ಮೂಲಭೂತ ಹಕ್ಕು ಎಂದು ಅವರು ಹೇಳಿದ್ದಾರೆ.
ಏಮ್ಸ್ ಸ್ಥಾಪನೆಗಾಗಿ ಉದ್ದೇಶಿತ ಸ್ಥಳಗಳ ಪಟ್ಟಿಯಲ್ಲಿ ಕಾಸರಗೋಡು ಸೇರಿಸಬೇಕು, ಎಂಡೋಸಲ್ಫಾನ್ ರೋಗಿಗಳಿಗೆ ವಿಶೇಷ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡುವುದು ಮತ್ತು ಮೂರು, ಎಂಡೋಸಲ್ಫಾನ್ ರೋಗಿಗಳಿಗೆ ಡೇ ಕೇರ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುದು ದಯಾಬಾಯಿ ಅವರ ಪ್ರಮುಖ ಮೂರು ಬೇಡಿಕೆಗಳಾಗಿವೆ.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕರ್ನಾಟಕ ಸರ್ಕಾರ ಅವಕಾಶ ನೀಡದ ಕಾರಣ ಜಿಲ್ಲೆಯ ಗಡಿಯಲ್ಲಿ 20 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗೀ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ. ತನಗೆ 82 ವರ್ಷ ಆದರೆ 28 ವರ್ಷ ಎಂದು ಭಾವಿಸಿ ಸುದೀರ್ಘ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧ ಎನ್ನುತ್ತಾರೆ ದಯಾಬಾಯಿ.


