
ಜಾರಿ ನಿರ್ದೇಶನಾಲಯ
ಮುಂಬೈ: ಜಾರಿ ನಿರ್ದೇಶನಾಲಯ ಆ.04 ರಂದು ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರಿಗೆ ನೋಟೀಸ್ ಜಾರಿ ಮಾಡಿದೆ.
ಪತ್ರಾ ಚಾಲ್ ಭೂ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನೋಟಿಸ್ ಜಾರಿಗೊಳಿಸಲಾಗಿದ್ದು, ವರ್ಷ ರಾವತ್ ಅವರ ಖಾತೆಯಿಂದ ಹಣದ ವಹಿವಾಟು ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಇದನ್ನೂ ಓದಿ: ಭೂ ಹಗರಣ: ತೀವ್ರ ವಿಚಾರಣೆ, ದಾಳಿ ಬಳಿಕ ಶಿವಸೇನೆ ಸಂಸದ ಸಂಜಯ್ ರಾವತ್ ಬಂಧನ
ಇನ್ನು ರಾವತ್ ಅವರ ಇಡಿ ಬಂಧನ ಆ.08 ವರೆಗೆ ವಿಸ್ತರಣೆಯಾಗಿದೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದ ಸಂಜಯ್ ರಾವುತ್ ಅವರನ್ನು ಆರು ಗಂಟೆಗಳ ವಿಚಾರಣೆ ಬಳಿಕ ಆ.1 ರಂದು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಲಾಗಿತ್ತು.