ನಿತೀಶ್ ಜೊತೆ ಮಾತುಕತೆ ನಂತರವೂ ಮಿತ್ರಪಕ್ಷದ ಮನವೊಲಿಕೆಯಲ್ಲಿ ಅಮಿತ್ ಶಾ ವಿಫಲ!
ಪಾಟ್ನ: ಬಿಹಾರದಲ್ಲಿ ಬಿಜೆಪಿ-ಜೆಡಿಯು ನಡುವಿನ ಮೈತ್ರಿ ಮುರಿದುಬಿದ್ದಿದ್ದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಬಿಜೆಪಿಗೆ ತೀವ್ರ ಹಿನ್ನೆಡೆಯುಂಟಾಗಿದೆ.
ಮೂಲಗಳ ಪ್ರಕಾರ ಸೋಮವಾರ ರಾತ್ರಿ ಖುದ್ದು ಅಮಿತ್ ಶಾ ನಿತೀಶ್ ಕುಮಾರ್ ಗೆ ಕರೆ ಮಾಡಿ 6 ನಿಮಿಷಗಳ ಕಾಲ ಮಾತನಾಡಿದ್ದರು.
ನಿತೀಶ್ ಕುಮಾರ್ ಅವರನ್ನು ಎನ್ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವಂತೆ ಮನವಿ ಮಾಡಿದ್ದರು ಅಷ್ಟೇ ಅಲ್ಲದೇ 2025 ವರೆಗೂ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೀರಿ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ಇದ್ಯಾವುದಕ್ಕೂ ನಿತೀಶ್ ಕುಮಾರ್ ಮನವೊಲಿಕೆಯಾಗಲಿಲ್ಲ. ರೀಡಿಫ್.ಕಾಮ್ ನ ವರದಿಯ ಪ್ರಕಾರ, ಈಗ ಬಿಜೆಪಿಯಿಂದ ಹೊರಬಂದಿರುವ ನಿತೀಶ್ ಕುಮಾರ್ ಗೆ ಆರ್ ಜೆಡಿ, ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ ಜೆಡಿ ಮೂಲಗಳ ಪ್ರಕಾರ ಮಹಾಘಟಬಂಧನ್ 2.0 ಸರ್ಕಾರ ರಚನೆಯಾಗಲಿದ್ದು, ಶೀಘ್ರವೇ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಲಿದೆ.ಜೆಡಿಯು ಸಂಸದರು, ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಯಾವುದೇ ನಿರ್ಧಾರ ಕೈಗೊಂಡರೂ ಬದ್ಧ ಎಂದು ಶಾಸಕರು, ಸಂಸದರು ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ