ಬಿಹಾರದ ರಾಜಕೀಯ ಬೆಳವಣಿಗೆ ಬಗ್ಗೆ ದೇವೇಗೌಡ ಅಭಿಪ್ರಾಯ ಇದು...
ಬಿಹಾರದ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ದೇಶದ ರಾಜಕೀಯದಲ್ಲಿ ಜನತಾದಳ ಪರಿವಾರ ಮತ್ತೆ ಪರ್ಯಾಯ ಆಯ್ಕೆಯಾಗುತ್ತಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Published: 09th August 2022 11:32 PM | Last Updated: 10th August 2022 01:24 PM | A+A A-

ದೇವೇಗೌಡ
ಬೆಂಗಳೂರು: ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಜೆಡಿಯು ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸುತ್ತಿದೆ. ಈ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ದೇಶದ ರಾಜಕೀಯದಲ್ಲಿ ಜನತಾದಳ ಪರಿವಾರ ಮತ್ತೆ ಪರ್ಯಾಯ ಆಯ್ಕೆಯಾಗುತ್ತಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ಮಹಾಘಟಬಂಧನ್ ಸರ್ಕಾರ, ಬುಧವಾರ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕಾರ
ಬಿಹಾರದಲ್ಲಿ ನಡೆದಿರುವ ಬೆಳವಣಿಗೆ ಜನತಾ ಪರಿವಾರದ ಮೂಲವನ್ನು ಹೊಂದಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸುತ್ತಿದ್ದು, ಈ ಬೆಳವಣಿಗೆ ಜನತಾ ಪರಿವಾರ ಒಗ್ಗಟ್ಟಿನಿಂದ ಇದ್ದ ದಿನಗಳನ್ನು ನೆನೆಪಿಸುತ್ತಿದೆ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.
I have been watching the developments in Bihar. It made me think of the days when the Janata Dal parivar was under one roof. It is gave three PMs. I am in my advanced years, but if the younger generation decides it can offer a good alternative to this great nation.
— H D Devegowda (@H_D_Devegowda) August 9, 2022
ಬಿಹಾರದ ಬೆಳವಣಿಗೆಗಳು ನನಗೆ ಜನತಾದಳ ಪರಿವಾರ ಒಗ್ಗಟ್ಟಿನಿಂದ ಇದ್ದ ದಿನಗಳನ್ನು ನೆನಪಿಸುತ್ತಿದೆ. ಜನತಾ ಪರಿವಾರ ಮೂವರು ಪ್ರಧಾನಿಗಳನ್ನು ನೀಡಿದೆ. ನಾನು ನನ್ನ ಉತ್ತರಾರ್ಧದ ದಿನಗಳಲ್ಲಿದ್ದೇನೆ ಆದರೆ ಈಗಿನ ಯುವ ಜನತೆ ನಿರ್ಧರಿಸಿದರೆ ಈ ಶ್ರೇಷ್ಠ ರಾಷ್ಟ್ರಕ್ಕೆ ಉತ್ತಮ ಪರ್ಯಾಯ ರಾಜಕೀಯ ಶಕ್ತಿಯನ್ನು ನೀಡಬಹುದು ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.