ಲಂಪಿ ರೋಗ: ಪ್ರಾಣಿಗಳ ಸಂತೆ, ಜಾತ್ರೆ ನಿಷೇಧಿಸಿದ ರಾಜಸ್ಥಾನ ಸರ್ಕಾರ

ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದ ಉಂಟಾಗುವ ಚರ್ಮಗಂಟು ಸೋಂಕಿನಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಪ್ರಾಣಿಗಳ ಸಂತೆ, ಅಥವಾ ಜಾತ್ರೆ ನಡೆಸುವುದನ್ನು ನಿಷೇಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ಥಾನದಲ್ಲಿ ಲಂಪಿ ವೈರಸ್‌ನಿಂದ ಉಂಟಾಗುವ ಚರ್ಮಗಂಟು ಸೋಂಕಿನಿಂದ 12,800 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಪ್ರಾಣಿಗಳ ಸಂತೆ, ಅಥವಾ ಜಾತ್ರೆ ನಡೆಸುವುದನ್ನು ನಿಷೇಧಿಸಿದೆ.

ಆಗಸ್ಟ್ 10 ರವರೆಗೆ ರಾಜ್ಯದಲ್ಲಿ ವರದಿಯಾದ ಒಟ್ಟು ಜಾನುವಾರುಗಳ ಪೈಕಿ ಶ್ರೀ ಗಂಗಾನಗರದಲ್ಲಿ ಗರಿಷ್ಠ 2,511 ಸಾವುಗಳು ವರದಿಯಾಗಿವೆ, ನಂತರ ಬಾರ್ಮರ್‌ನಲ್ಲಿ 1,619, ಜೋಧ್‌ಪುರದಲ್ಲಿ 1,581, ಬಿಕಾನೇರ್‌ನಲ್ಲಿ 1,156, ಜಾಲೋರ್‌ನಲ್ಲಿ 1,150 ಮತ್ತು ಜಾಲೋರ್‌ನಲ್ಲಿ 1,138 ಸಾವುಗಳು ವರದಿಯಾಗಿವೆ.

"ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಐದು ಜಿಲ್ಲೆಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ರಾಜಸ್ಥಾನ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಪಿ ಸಿ ಕಿಶನ್ ಅವರು ತಿಳಿಸಿದ್ದಾರೆ.

ಇಲಾಖೆಯ ಪ್ರಕಾರ, ಒಟ್ಟು 2,81,484 ಪ್ರಾಣಿಗಳು ಈ ರೋಗದಿಂದ ಬಳಲುತ್ತಿವೆ ಮತ್ತು 2,41,685 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ.

ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಾಜಸ್ಥಾನದಲ್ಲಿ ಪ್ರಾಣಿ ಸಂತೆ, ಜಾತ್ರೆ ಆಯೋಜಿಸುವುದನ್ನು ನಿಷೇಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಅಲ್ಲದೆ ಮೃತ ಜಾನುವಾರುಗಳ ಸುರಕ್ಷಿತ ವಿಲೇವಾರಿಗೆ ರಾಜ್ಯ ಸರ್ಕಾರವೂ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com