ವಿಮಾನದಲ್ಲಿ ಬಾಬ್ಬಿ ಕಟಾರಿಯಾ ಧೂಮಪಾನ ವಿಡೀಯೋ ವೈರಲ್: ತನಿಖೆಗೆ ಆದೇಶಿಸಿದ ವಿಮಾನಯಾನ ಸಚಿವ ಸಿಂಧಿಯಾ

 ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುವುದಕ್ಕೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶಿಸಿದ್ದಾರೆ.
ವಿಡಿಯೋದಲ್ಲಿ ಕಂಡುಬಂದಿರುವ ದೃಶ್ಯದ ಚಿತ್ರ
ವಿಡಿಯೋದಲ್ಲಿ ಕಂಡುಬಂದಿರುವ ದೃಶ್ಯದ ಚಿತ್ರ

ನವದೆಹಲಿ: ಬಾಡಿ ಬಿಲ್ಡರ್ ಬಾಬ್ಬಿ ಕಟಾರಿಯಾ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುವುದಕ್ಕೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶಿಸಿದ್ದಾರೆ.
 
ಇನ್ಸ್ಟಾಗ್ರಾಮ್ ನಲ್ಲಿ 6.3 ಲಕ್ಷ ಮಂದಿ ಅನುಯಾಯಿಗಳನ್ನು ಹೊಂದಿರುವ ಕಟಾರಿಯಾ ಸ್ಪೈಸ್ ಜೆಟ್ ವಿಮಾನದ ಮಧ್ಯದ ಸಾಲಿನಲ್ಲಿರುವ ಆಸನದಲ್ಲಿ ಕುಳಿತು ಸಿಗರೇಟ್ ಗೆ ಕಿಡಿ ಹೊತ್ತಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. 

ವಿಮಾನದ ಒಳಗೆ ಲೈಟರ್ ನ್ನು ಕೊಂಡೊಯ್ಯುವುದಕ್ಕೆ ಪ್ರಯಾಣಿಕರಿಗೆ ಅನುಮತಿ ಇಲ್ಲ. ಅಷ್ಟೇ ಅಲ್ಲದೇ ವಿಮಾನದ ಒಳಗೆ ಧೂಮಪಾನ ಮಾಡುವುದಕ್ಕೂ ಅವಕಾಶವಿಲ್ಲ.

ಮೂಲಗಳ ಪ್ರಕಾರ, ದುಬೈ ನಿಂದ ದೆಹಲಿಗೆ ಆಗಮಿಸುತ್ತಿದ್ದ ಸ್ಪೈಸ್ ಜೆಟ್ ನ ಎಸ್ ಜಿ706 ವಿಮಾನದಲ್ಲಿ ಈ ಘಟನೆ ನಡೆದಿದೆ. 

ಈ ವಿಡೀಯೋ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾಗ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಧಿಯಾ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಈ ರೀತಿಯ ಅಪಾಯಕಾರಿ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

2022 ರ ಜನವರಿಯಲ್ಲಿ ಈ ವಿಷಯ ತಮ್ಮ ಗಮನಕ್ಕೆ ಬಂದಾಗ ತನಿಖೆ, ವಿಚಾರಣೆ ನಡೆಸಿದ್ದೇವೆ. ಈ ಸಂಬಂಧ ವಿಮಾನಯಾನ ಸಂಸ್ಥೆ ಉದ್ಯೋಗ್ ವಿಹಾರ್ ಪಿಎಸ್ ಗುರುಗ್ರಾಮದಲ್ಲಿ ದೂರು ಸಲ್ಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ವಿಮಾನ ಸಂಸ್ಥೆಯ ವಕ್ತಾರರು ಈ ಬಗ್ಗೆ ಮಾತನಾಡಿ, ಈ ಕೃತ್ಯದ ಬಗ್ಗೆ ಸಿಬ್ಬಂದಿಗಾಗಲೀ ಅಥವಾ ಪ್ರಯಾಣಿಕರಿಗಾಗಲೀ ಅರಿವು ಇರಲಿಲ್ಲ. ಜ.24, 2022 ರಂದು ಈ ಕೃತ್ಯ ಸಾಮಾಜಿಕ ಜಾಲತಾಣಗಳ ಮೂಲಕ ಗಮನಕ್ಕೆ ಬಂದಿತ್ತು. ತಕ್ಷಣವೇ ಅದನ್ನು ಆಂತರಿಕ ಸಮಿತಿ ರಚಿಸಿ ವಿಚಾರಣೆಗೆ ಒಳಪಡಿಸಲಾಯಿತು. ಆತನನ್ನು ನೋ ಫೈಯಿಂಗ್ ಲಿಸ್ಟ್ ಗೆ 15 ದಿನಗಳ ಕಾಲ ಸೇರಿಸಲಾಗಿತ್ತು ಎಂದು ತಿಳಿಸಿದ್ದಾರೆ. 

ಡಿಜಿಸಿಎ ಮಾಹಿತಿಯ ಪ್ರಕಾರ, ನಿಯಮಗಳನ್ನು ಪಾಲನೆ ಮಾಡದೇ ಇದ್ದ ಪ್ರಯಾಣಿಕರನ್ನು ನಿರ್ದಿಷ್ಟ ಅವಧಿಗೆ ನಿಷೇಧಿಸುವ ಅಧಿಕಾರ ವಿಮಾನಯಾನ ಸಂಸ್ಥೆಗೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com