ಸಿಎಂ ನಿತೀಶ್ ಕುಮಾರ್, ತೇಜಸ್ವಿ ಯಾದವ್
ಸಿಎಂ ನಿತೀಶ್ ಕುಮಾರ್, ತೇಜಸ್ವಿ ಯಾದವ್

ಇದು ನಿಜವಾದ 'ಮಹಾಘಟಬಂಧನ್'; ಡೀಲ್ ಅಲ್ಲ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್

ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರಿಂದ ರೂಪಿಸಲ್ಪಟ್ಟ ನಿಜವಾದ 'ಮಹಾಘಟಬಂಧನ್ ಸರ್ಕಾರ' ರಚನೆಯಾಗಿದೆ. ಇದು ಸಹಜ ಮೈತ್ರಿಯಾಗಿದೆ, ಡೀಲ್ ಅಲ್ಲ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ನವದೆಹಲಿ/ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರಿಂದ ರೂಪಿಸಲ್ಪಟ್ಟ ನಿಜವಾದ 'ಮಹಾಘಟಬಂಧನ್ ಸರ್ಕಾರ' ರಚನೆಯಾಗಿದೆ. ಇದು ಸಹಜ ಮೈತ್ರಿಯಾಗಿದೆ, ಡೀಲ್ ಅಲ್ಲ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ ಡಿಎ ತೊರೆಯುವ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ನಾವು ಒಪ್ಪಿಕೊಂಡು, ಒಂದಾಗಿದ್ದೇವೆ. ಒಂದು ತಿಂಗಳೊಳಗೆ ಬಿಹಾರ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗ ನೀಡಿದ ರಾಜ್ಯವಾಗುತ್ತದೆ ಎಂದರು.

ಇದಕ್ಕೂ ಮುನ್ನಾ ಪಾಟ್ನಾದಲ್ಲಿ ಮಾತನಾಡಿದ ತೇಜಸ್ವಿ ಯಾದವ್, ರಾಜಕೀಯ ಸೇಡಿಗಾಗಿ ದುರುಪಯೋಗದ ಆರೋಪಗಳನ್ನು ಎದುರಿಸುತ್ತಿರುವ ಇಡಿ ಮತ್ತು ಸಿಬಿಐನ ಕಚೇರಿಗಳನ್ನು ಸ್ಥಾಪಿಸಲು ತಮ್ಮ ನಿವಾಸವನ್ನು ನೀಡಲು ಸಿದ್ಧರಿರುವುದಾಗಿ ಹೇಳುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗುಡುಗಿದರು. ನನ್ನ ಮನೆಯೊಳಗೆ ಇಡಿ, ಕಚೇರಿ ಸ್ಥಾಪಿಸುವುದನ್ನು ಸ್ವಾಗತಿಸುತ್ತೇನೆ. ಆದರೆ. ಇದರಿಂದಲೂ ಶಾಂತಿ ದೊರೆಯದಿದ್ದರೆ, ಅದಕ್ಕೆ ನಾನು ಸಹಾಯ ಮಾಡಲಾರೆ ಎಂದು ವ್ಯಂಗ್ಯವಾಡಿದರು.

ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಪತನವಾಗಿ ಹೊಸ ಸರ್ಕಾರ ರಚನೆಯಾಗಿದ್ದು, ಹಣ ವರ್ಗಾವಣೆ ಪ್ರಕರಣ ಕೇಸ್ ನಲ್ಲಿ ತಮ್ಮ ಹೆಸರು ಇರುವ ಕಾರಣ ಕೇಂದ್ರೀಯ ತನಿಖಾ ಸಂಸ್ಥೆಗಳ ಭಯ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಮೊದಲ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾದಾಗಲೂ ಈ ಸಂಸ್ಥೆಗಳ ಭಯವಿರಲಿಲ್ಲ ಎಂದರು.

ನಾನು ಬಿಹಾರ ಹಿತಾಸಕ್ತಿಗಳಿಗಾಗಿ ಕೇಂದ್ರದ ಜೊತೆ ಹೋರಾಡುತ್ತಿದ್ದೆ. ನನ್ನ ತಂದೆ ಇಲ್ಲದಿದ್ದಾಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಮತ್ತು ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದಾಗಿನಿಂದಲೂ ನಾನು ಪ್ರಬುದ್ಧನಾಗಿದ್ದೇನೆ. ನಾನು ಯಾವುದೇ ಅಪರಾಧ ಮಾಡಿದ್ದರೆ ಇಲ್ಲಿಯವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಯಾದವ್ ಪ್ರಶ್ನಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com