150 ಪಾರಂಪರಿಕ ತಾಣಗಳಲ್ಲಿ ಪ್ರತಿನಿತ್ಯ ಹಾರಲಿರುವ ತಿರಂಗ!

ಎಎಸ್ಐ ನ ವ್ಯಾಪ್ತಿಯ 150 ಪಾರಂಪರಿಕ ತಾಣಗಳಲ್ಲಿ ಇನ್ನು ಮುಂದೆ ಪ್ರತಿ ನಿತ್ಯವೂ ತಿರಂಗ ಹಾರಾಡಲಿದೆ.
ಲಾಲ್ ಚೌಕ್ ನಲ್ಲಿ ತಿರಂಗ
ಲಾಲ್ ಚೌಕ್ ನಲ್ಲಿ ತಿರಂಗ

ನವದೆಹಲಿ: ಎಎಸ್ಐ ನ ವ್ಯಾಪ್ತಿಯ 150 ಪಾರಂಪರಿಕ ತಾಣಗಳಲ್ಲಿ ಇನ್ನು ಮುಂದೆ ಪ್ರತಿ ನಿತ್ಯವೂ ತಿರಂಗ ಹಾರಾಡಲಿದೆ. ಆಜಾದಿಯ ಅಮೃತ ಮಹೋತ್ಸವದ ಅಂಗವಾಗಿ ಈ 150 ತಾಣಗಳಲ್ಲಿ ಶಾಶ್ವತವಾಗಿ ತಿರಂಗ ಹಾರುವ ವ್ಯವಸ್ಥೆ ಮಾಡಲಾಗುತ್ತಿದೆ. 

ಉಪ ಕಚೇರಿಗಳಿಂದ ತರಿಸಿಕೊಂಡಿರುವ ಶಿಫಾರಸುಗಳನ್ನು ಆಢರಿಸಿ ಐತಿಹಾಸಿಕ ರಚನೆಗಳ ಪ್ರದೇಶಗಳು ಈಗಾಗಲೇ ತ್ರಿವರ್ಣ ಧ್ವಜದ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ.
 
ಪಾರಂಪರಿಕ ತಾಣಗಳನ್ನು ತಿರಂಗ ದೀಪಗಳಿಂದ ಅಲಂಕರಿಸುವುದು ಆ.13 ರಿಂದ ಆ.15 ವರೆಗೆ ಇರಲಿದೆ. ಆದರೆ ಆ ಪ್ರದೇಶಗಳಲ್ಲಿ ಇನ್ನು ಶಾಶ್ವತವಾಗಿ ತ್ರಿವರ್ಣ ಧ್ವಜ ಹಾರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಅಂತಿಮ ತಯಾರಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದು, ವ್ಯವಸ್ಥೆಗಳನ್ನು ಖುದ್ದು ಪ್ರಧಾನ ನಿರ್ದೇಶಕರಾಗಿರುವ ವಿ ವಿದ್ಯಾವತಿ ಗಮನಿಸುತ್ತಿದ್ದಾರೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಮಾರಾಟ: ಶೇ.90% ರಷ್ಟು ಗುರಿ ತಲುಪಿದ ಬಿಬಿಎಂಪಿ, ಹೆಚ್ಚುವರಿ 5 ಲಕ್ಷ ಧ್ವಜ ಮಾರಾಟ ಗುರಿ
 
ಆ.15 ರಂದು ಪಾರಂಪರಿಕ ತಾಣಗಳಲ್ಲಿ ಧ್ವಜಾರೋಹಣ ನಡೆಯಲಿದ್ದು, ಆ ಧ್ವಜಗಳನ್ನು ಅಲ್ಲಿ ಶಾಶ್ವತವಾಗಿ ಇರಿಸಲಾಗುತ್ತದೆ.  

ತ್ರಿವರ್ಣ ಧ್ವಜದ ದೀಪಗಳಿಂದ ಅಲಂಕಾರಗೊಳಿಸುವ ಪಟ್ಟಿಯಲ್ಲಿ ತಾಜ್ ಮಹಲ್ ಬಿಟ್ಟು ಹೋಗಿದ್ದು ಹಲವರು ಹುಬ್ಬೇರಿಸುವಂತೆ ಮಾಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಮಾರ್ಬಲ್ ಕಲ್ಲಿನ ರಚನೆಯ ಮೇಲೆ ದೀಪಗಳ ಬೆಳಕು ಬಿದ್ದರೆ, ಅದು ಕೀಟಗಳನ್ನು ಆಕರ್ಷಿಸುತ್ತದೆ, ಅವುಗಳ ಮಲವಿಸರ್ಜನೆಯಿಂದಾಗಿ ಮಾರ್ಬಲ್ ಶಿಲೆಗೆ ಹಾನಿ ಉಂಟಾಗಲಿದೆ, ಆದ್ದರಿಂದ  ತಾಜ್ ಮಹಲ್ ನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com