ಹರ್ ಘರ್ ತಿರಂಗ ಅಭಿಯಾನ: 5 ಕೋಟಿಗೂ ಅಧಿಕ ಫ್ಲಾಗ್ ಸೆಲ್ಫಿ ಅಪ್ ಲೋಡ್ 

ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಾರಂಭಿಸಲಾಗಿದ್ದ ವೆಬ್ ಸೈಟ್ ನಲ್ಲಿ ಈ ವರೆಗೂ 5 ಕೋಟಿ ಮಂದಿ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 
ಹರ್ ಘರ್ ತಿರಂಗ  (ಸಂಗ್ರಹ ಚಿತ್ರ)
ಹರ್ ಘರ್ ತಿರಂಗ (ಸಂಗ್ರಹ ಚಿತ್ರ)

ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಾರಂಭಿಸಲಾಗಿದ್ದ ವೆಬ್ ಸೈಟ್ ನಲ್ಲಿ ಈ ವರೆಗೂ 5 ಕೋಟಿ ಮಂದಿ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 

ಈ ಅಂಕಿ-ಅಂಶಗಳನ್ನು ಸಂಸ್ಕೃತಿ ಸಚಿವಾಲಯ ಹಂಚಿಕೊಂಡಿದ್ದು, ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದೆ.

75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಮುಂದಿನ 25 ವರ್ಷಗಳಿಗೆ ಹಾಕಿಕೊಂಡಿರುವ ನೀಲನಕ್ಷೆಯನ್ನು ಜನತೆಯ ಎದುರು ಹಂಚಿಕೊಂಡರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನ ಘೋಷಿಸಿದ್ದ ಪ್ರಧಾನಿ ಮೋದಿ,  ಭಾಗವಾಗಿ ಮನೆ ಮನೆಗಳಲ್ಲಿ ತಿರಂಗಾ ಹಾರಿಸುವುದು/ ಪ್ರದರ್ಶಿಸಲು ಜುಲೈ 22 ರಂದು ಕರೆ ನೀಡಿದ್ದರು. ಇದಕ್ಕಾಗಿ 
www.harghartiranga.com ಎಂಬ ವಿಶೇಷ ವೆಬ್ ಸೈಟ್ ನ್ನು ಪ್ರಾರಂಭಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com