ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ರಾಜಸ್ಥಾನ ಕಾಂಗ್ರೆಸ್ ಶಾಸಕ ರಾಜೀನಾಮೆ 

ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘ್ ವಾಲ್ ತಮ್ಮ ರಾಜೀನಾಮೆಯನ್ನು ಸಿಎಂ ಅಶೋಕ್ ಗೆಹ್ಲೋಟ್ ಗೆ ಸಲ್ಲಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಶಾಸಕ
ರಾಜಸ್ಥಾನ ಕಾಂಗ್ರೆಸ್ ಶಾಸಕ

ಜೈಪುರ: ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘ್ ವಾಲ್ ತಮ್ಮ ರಾಜೀನಾಮೆಯನ್ನು ಸಿಎಂ ಅಶೋಕ್ ಗೆಹ್ಲೋಟ್ ಗೆ ಸಲ್ಲಿಸಿದ್ದಾರೆ.

ತಮ್ಮ ಸಮುದಾಯವನ್ನು ರಕ್ಷಿಸಲು ಸಾಧ್ಯವಾಗದೇ ಇದ್ದಲ್ಲಿ ತಮಗೆ ಶಾಸಕನಾಗಿ ಮುಂದುವರೆಯುವ ಹಕ್ಕು ಇರುವುದಿಲ್ಲ ಎಂದು ಪನಾ ಚಂದ್ ಮೇಘ್ ವಾಲ್ ಹೇಳಿದ್ದಾರೆ.

9 ವರ್ಷದ ದಲಿತ ಬಾಲಕ ನೀರಿನ ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬುದಕ್ಕಾಗಿ ಶಾಲಾ ಶಿಕ್ಷಕರೊಬ್ಬರು ಆತನನ್ನು ಹೊಡೆದಿದ್ದರು ಪರಿಣಾಮ ಬಾಲಕ ಮೃತಪಟ್ಟಿದ್ದ. ಈ ಘಟನೆಯಾದ 2 ದಿನಗಳ ಬೆನ್ನಲ್ಲೇ ಶಾಸಕ ಪನಾ ಚಂದ್ ಮೇಘ್ ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಮ್ಮ ಸಮುದಾಯದ ರಕ್ಷಣೆ ಸಾಧ್ಯವಾಗದೇ ಇದ್ದಲ್ಲಿ, ನಮಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇರುವುದಿಲ್ಲ.ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಯಾವುದೇ ಹುದ್ದೆ ಇಲ್ಲದೆಯೂ ನಾವು ಜನರ ಸೇವೆ ಮಾಡಬಹುದು ಎಂದು ಮೇಘ್ ವಾಲ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com