ಮಲೇಷ್ಯಾದಿಂದ ತೇಜಸ್‌ ಯುದ್ಧ ವಿಮಾನ ಖರೀದಿ? ಕೌಲಾಲಂಪುರದಲ್ಲಿ ಕಚೇರಿ ತೆರೆಯಲು ಆರ್ ಎಂಎಎಫ್ ಜತೆ ಎಚ್ಎಎಲ್ ಒಪ್ಪಂದ

ಭಾರತದ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಲ್) ಕೌಲಾಲಂಪುರದಲ್ಲಿ(ಮಲೇಷ್ಯಾ) ತನ್ನ ಕಚೇರಿಯನ್ನು ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.
ತೇಜಸ್ ಲಘು ಯುದ್ಧ ವಿಮಾನ
ತೇಜಸ್ ಲಘು ಯುದ್ಧ ವಿಮಾನ

ಬೆಂಗಳೂರು: ಭಾರತದ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಲ್) ಕೌಲಾಲಂಪುರದಲ್ಲಿ(ಮಲೇಷ್ಯಾ) ತನ್ನ ಕಚೇರಿಯನ್ನು ತೆರೆಯುವ ಒಪ್ಪಂದಕ್ಕೆ ಸಹಿ ಹಾಕಿದೆ.

ಫೈಟರ್ ಲೀಡ್-ಇನ್ ಟ್ರೈನರ್(ಎಫ್‌ಎಲ್‌ಐಟಿ) ಎಲ್‌ಸಿಎ ಮತ್ತು ರಾಯಲ್ ಮಲೇಷಿಯನ್ ಏರ್ ಫೋರ್ಸ್‌ನ(ಆರ್‌ಎಂಎಎಫ್) ಇತರ ಅವಶ್ಯಕತೆಗಳಾದ ಎಸ್ ಯು-30 ಎಂಕೆಎಂ ಮತ್ತು ಹಾಕ್ ಅಪ್‌ಗ್ರೇಡ್‌ಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಪಡೆಯಲು ಮಲೇಷ್ಯಾದ ಕಚೇರಿಯು ಎಚ್‌ಎಎಲ್‌ಗೆ ಸಹಾಯ ಮಾಡುತ್ತದೆ ಎಂದು ಬೆಂಗಳೂರನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್ಎಎಲ್ ಗುರುವಾರ ತಿಳಿಸಿದೆ.

"ಇದು ಮಲೇಷ್ಯಾದಲ್ಲಿ ಸುಸ್ಥಿರ ಏರೋಸ್ಪೇಸ್, ಮಲೇಷಿಯಾದ ರಕ್ಷಣಾ ಪಡೆಗಳು ಮತ್ತು ಉದ್ಯಮವನ್ನು ಬೆಂಬಲಿಸುವಲ್ಲಿ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ" ಎಂದು ಎಚ್ಎಎಲ್ ಹೇಳಿದೆ.

ಆರ್ ಎಂಎಎಪ್ ನೀಡಿದ ಜಾಗತಿಕ ಟೆಂಡರ್‌ಗೆ ಅನುಗುಣವಾಗಿ ಎಚ್ಎಎಲ್ 18 FLIT LCA ವಿಮಾನಗಳ ಪೂರೈಕೆಗಾಗಿ 2021ರ ಅಕ್ಟೋಬರ್‌ನಲ್ಲಿ ಮಲೇಷ್ಯಾ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. 

"ಟೆಂಡರ್‌ನ ಅಂತಿಮ ವಿಜೇತರನ್ನು ಮಲೇಷಿಯಾದ ಅಧಿಕಾರಿಗಳು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ಎಲ್‌ಸಿಎ ತೇಜಸ್ ಆರ್‌ಎಂಎಎಫ್ ಕೋರಿದ ಎಲ್ಲಾ ನಿಯತಾಂಕಗಳನ್ನು ಪೂರೈಸುವ ಕಾರಣ ಬಿಡ್‌ನಲ್ಲಿ ಆಯ್ಕೆಯಾಗುವ ನ್ಯಾಯಯುತ ಅವಕಾಶವನ್ನು ಎಚ್ಎಎಲ್ ಹೊಂದಿದೆ" ಎಂದು ತಿಳಿಸಿದೆ.

ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನಗಳು ಚೀನಾ, ರಷ್ಯಾ, ಕೊರಿಯಾ ನಿರ್ಮಿತ ಯುದ್ಧ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿದ್ದು, ತೇಜಸ್‌ ವಿಮಾನಗಳು ಮೊದಲ ಆಯ್ಕೆಯಾಗಿವೆ. 2023ರೊಳಗೆ 83 ಯುದ್ಧ ವಿಮಾನ ತಯಾರು ಮಾಡುವುದಕ್ಕೆ ಕೇಂದ್ರ ಸರಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಎಚ್‌ಎಎಲ್‌ಗೆ 48 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com