ಬಾಬಾ ಜೊತೆ ಪೊಲೀಸ್ ಅಧಿಕಾರಿ
ಬಾಬಾ ಜೊತೆ ಪೊಲೀಸ್ ಅಧಿಕಾರಿ

ಹತ್ಯೆ ಪ್ರಕರಣದ ತನಿಖೆಗೆ "ಬಾಬಾ" ಮಾರ್ಗದರ್ಶನ ಪಡೆದ ಮಧ್ಯಪ್ರದೇಶ ಪೊಲೀಸ್ ಅಧಿಕಾರಿ ಅಮಾನತು!

ಯಾವುದಾದರೂ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣವೊಂದರಲ್ಲಿ ಧಾರ್ಮಿಕ ಬೋಧಕ (ಬಾಬಾ) ಸಹಾಯ ಪಡೆದ ಉದಾಹರಣೆಗಳನ್ನು ನೋಡಿದ್ದೀರಾ? ಹಾಗೊಂದು ವೇಳೆ ಇದ್ದರೆ ಅದು ಸಿನಿಮಾಗಳಲ್ಲಷ್ಟೇ ಎಂದುಕೊಳ್ಳಬೇಡಿ. ನಿಜ ಜೀವನದಲ್ಲೂ ಇಂಥಹದ್ದೊಂದು ಯಡವಟ್ಟು ನಡೆದಿದೆ.
Published on

ಭೋಪಾಲ್: ಯಾವುದಾದರೂ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣವೊಂದರಲ್ಲಿ ಧಾರ್ಮಿಕ ಬೋಧಕ (ಬಾಬಾ) ಸಹಾಯ ಪಡೆದ ಉದಾಹರಣೆಗಳನ್ನು ನೋಡಿದ್ದೀರಾ? ಹಾಗೊಂದು ವೇಳೆ ಇದ್ದರೆ ಅದು ಸಿನಿಮಾಗಳಲ್ಲಷ್ಟೇ ಎಂದುಕೊಳ್ಳಬೇಡಿ. ನಿಜ ಜೀವನದಲ್ಲೂ ಇಂಥಹದ್ದೊಂದು ಯಡವಟ್ಟು ನಡೆದಿದೆ.

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಮಿತಾ ಪೊಲೀಸ್ ಠಾಣೆಯ ಎಎಸ್ಐ ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಹಿಡಿಯುವುದಕ್ಕಾಗಿ ಬಾಬಾ ಸಹಾಯ ಪಡೆದು ಈಗ ಅಮಾನತುಗೊಂಡಿದ್ದಾರೆ.
 
ಎಎಸ್ಐ ಎ. ಶರ್ಮಾ ಎಂಬುವವರು ಬಾಬಾ ಪಂಡೋಖರ್ ಸರ್ಕಾರ್ ಮಹಾರಾಜ್ ಎಂಬಾತನ ಬಳಿ 17 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಶಂಕಿತರನ್ನು ಗುರುತಿಸಲು ದೈವಿಕ ಸಹಾಯ ಕೇಳಿರುವ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಧಾರ್ಮಿಕ ಬೋಧಕನ ಸಹಾಯ ಪಡೆಯುವುದು ಮಾತ್ರವಲ್ಲದೇ, ಆತನ ಮಾರ್ಗದರ್ಶನದಂತೆ ಹತ್ಯೆಯಾದ ಬಾಲಕಿಯ ಸಂಬಂಧಿಯನ್ನು ಈ ಪೊಲೀಸ್ ಅಧಿಕಾರಿ ಬಂಧಿಸಿದ್ದರು.

ಈ ಘಟನೆ ಬಗ್ಗೆ ಕ್ರಮ ಕೈಗೊಂಡಿರುವ ಛತ್ತರ್‌ಪುರ ಜಿಲ್ಲೆಯ ಎಸ್ ಪಿ ಸಚಿನ್ ಶರ್ಮಾ, ಎಎಸ್ಐ ಎ ಶರ್ಮ ಅವರನ್ನು ಹಾಗೂ ಜಿಲ್ಲಾ ಪೊಲೀಸ್ ಠಾಣೆಗೆ ಸಂಬಂಧಿಸಿದ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ ಡಿಒಪಿ-ಖಜುರಾಹೊ) ಮನ್ಮೋಹನ್ ಸಿಂಗ್ ಬಘೇಲ್ ಅವರು ನಡೆಸಲಿದ್ದಾರೆ ಎಂದು ಎಸ್ ಪಿ ಶಶಾಂಕ್ ಜೈನ್ ಹೇಳಿದ್ದಾರೆ.
 
ಬಮಿತಾ ಪೊಲೀಸ್ ಠಾಣೆಯ ಎಎಸ್ಐ ಭಕ್ತಾದಿಗಳ ಹಿಂಡಿನ ನಡುವೆ ಬಾಬಾ ಸಹಾಯ ಕೇಳುತ್ತಿದ್ದ 2.50 ನಿಮಿಷಗಳ ವೀಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com