ಜೆಎನ್ ಯುನಲ್ಲಿ ಮತ್ತೆ ಗಲಾಟೆ: ಎಬಿವಿಪಿ ಅಧ್ಯಕ್ಷ ಸೇರಿ ಹಲವು ವಿದ್ಯಾರ್ಥಿಗಳಿಗೆ ಗಾಯ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(ಜೆಎನ್‌ಯು) ಮತ್ತೆ ಗಲಾಟೆ ನಡೆದಿದ್ದು. ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಕೇಳಲು ಹೋದ ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಗಾರ್ಡ್ಸ್ ಹಲ್ಲೆ ನಡೆಸಿದ್ದಾರೆ...
ಜೆಎನ್ ಯುನಲ್ಲಿ ಮತ್ತೆ ಗಲಾಟೆ
ಜೆಎನ್ ಯುನಲ್ಲಿ ಮತ್ತೆ ಗಲಾಟೆ

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(ಜೆಎನ್‌ಯು) ಮತ್ತೆ ಗಲಾಟೆ ನಡೆದಿದ್ದು. ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಕೇಳಲು ಹೋದ ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಗಾರ್ಡ್ಸ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಜೆಎನ್‌ಯು ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಸೇರಿದಂತೆ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಪ್ರಕಾರ, ತಮ್ಮ ಸ್ಕಾಲರ್‌ಶಿಪ್ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ತಡೆಹಿಡಿಯಲಾಗಿರುವ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜೆಎನ್‌ಯು ಆಡಳಿತ ಮಂಡಳಿ ಮೊರೆ ಹೋಗಿದ್ದೆವು. ಆದರೆ ಅಲ್ಲಿನ ಸಿಬ್ಬಂದಿ ಮತ್ತು ಗಾರ್ಡ್ಸ್, ತಮ್ಮ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಇದರಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಕೂಡ ಒಬ್ಬರಾಗಿದ್ದಾರೆ. ಶೀಘ್ರದಲ್ಲೇ ದೆಹಲಿ ಪೊಲೀಸರಿಗೆ ದೂರು ನೀಡುವುದಾಗಿ ಗಾಯಾಳು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಜೆಎನ್ ಯುನಲ್ಲಿ ನಡೆದ ಗಲಾಟೆ ಬಳಿಕ ವಿಡಿಯೋ ಕೂಡ ಹೊರ ಬಿದ್ದಿದೆ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಘರ್ಷಣೆ ಕಂಡುಬರುತ್ತಿದೆ. ಎರಡೂ ಕಡೆಯಿಂದ ಜಟಾಪಟಿ ನಡೆಯುತ್ತಿದೆ. ಜಗಳದಲ್ಲಿ ಕೆಲವು ವಿದ್ಯಾರ್ಥಿಗಳು ಮೇಜಿನ ಮೇಲೆ ಬೀಳುತ್ತಾರೆ. ಸಿಬ್ಬಂದಿ ವಿದ್ಯಾರ್ಥಿಗಳನ್ನು ಥಳಿಸಿ ಹೊರಗೆ ತಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com