ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಲಟಟ್ರು ಗೆಸ್ಟ್ ಹೌಸ್ ಗೆ ಜೆಎಂಎಂ, ಕಾಂಗ್ರೆಸ್ ಶಾಸಕರ ಸ್ಥಳಾಂತರ

ಮುಖ್ಯಮಂತ್ರಿ ಹೇಮಂತ್  ಸೊರೆನ್ ಅವರ ಶಾಸಕ ಸ್ಥಾನದ ಭವಿಷ್ಯ ಅನಿಶ್ಚಿತತೆಯಲ್ಲಿರುವಂತೆಯೇ ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.
ಶಾಸಕರೊಂದಿಗೆ ಸಿಎಂ ಹೇಮಂತ್ ಸೊರೆನ್
ಶಾಸಕರೊಂದಿಗೆ ಸಿಎಂ ಹೇಮಂತ್ ಸೊರೆನ್

ರಾಂಚಿ: ಮುಖ್ಯಮಂತ್ರಿ ಹೇಮಂತ್  ಸೊರೆನ್ ಅವರ ಶಾಸಕ ಸ್ಥಾನದ ಭವಿಷ್ಯ ಅನಿಶ್ಚಿತತೆಯಲ್ಲಿರುವಂತೆಯೇ ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ಶಾಸಕರ ಕುದುರೆ ವ್ಯಾಪಾರದ ಭೀತಿಯಿಂದ  ಸೊರೆನ್ ಮತ್ತು ಆಡಳಿತಾರೂಢ ಶಾಸಕರು ಮೂರು ಬಸ್‌ಗಳಲ್ಲಿ ಕೆಲವು ಅಜ್ಞಾತ ಸ್ಥಳಗಳಿಗೆ ತೆರಳುತ್ತಿರುವುದು ಕಂಡುಬಂದಿದೆ. ಸಂಜೆ ಇಲ್ಲಿಂದ 60 ಕಿಮೀ ದೂರದಲ್ಲಿರುವ ರಾಜ್ಯದ ಕುಂತಿ ಜಿಲ್ಲೆಯ ಲಟ್ರಟುವಿನ ಅತಿಥಿ ಗೃಹವೊಂದಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

ಆಡಳಿತಾರೂಢ ಜೆಎಂಎಂ- ಕಾಂಗ್ರೆಸ್ - ಆರ್ ಜೆಡಿ ಮೈತ್ರಿ ಸರ್ಕಾರದ ಶಾಸಕರು ಮೂರು ಬಸ್ ಗಳಲ್ಲಿ ತೆರಳಿದ್ದಾರೆ. ಇವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳ ಅಥವಾ ಛತ್ತೀಸ್ ಗಡಕ್ಕೆ ಈ ಶಾಸಕರನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ಮೊದಲಿಗೆ ಮೂಲಗಳು ಹೇಳಿದ್ದವು.  ಮುಖ್ಯಮಂತ್ರಿ ಹೇಮಂತ್ ಸೊರೆನ್ ನಿವಾಸದಲ್ಲಿ ಶಾಸಕರೊಂದಿಗೆ ಮೂರು ಬಾರಿ ಸರಣಿ ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಸಿಎಂ ಸಭೆಯಲ್ಲಿ ತಮ್ಮ ಲಗ್ಗೇಜ್ ನೊಂದಿಗೆ ಶಾಸಕರು ಕಂಡುಬಂದರು.

ಸಿಎಂ ಹೇಮಂತ್ ಸೊರೇನ್ ನೇತೃತ್ವದಲ್ಲಿ ರಾಂಚಿಯಿಂದ  ಕುಂತಿ ಜಿಲ್ಲೆಗೆ ಬಂದಿರುವ ಶಾಸಕರು, ಇಲ್ಲಿನ ಲಟ್ರಟು ಡ್ಯಾಂ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಎಲ್ಲ ಶಾಸಕರು ಇಲ್ಲಿಯ ಅತಿಥಿಗೃಹದಲ್ಲಿ ತಂಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇಡೀ ಪ್ರದೇಶದಲ್ಲಿ ಭಾರಿ ಪೊಲೀಸ್​ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com