ಜಮ್ಮು-ಕಾಶ್ಮೀರ: ಗುಲಾಂ ನಬಿ ಆಜಾದ್ ಬೆಂಬಲಿಸಿ, ಮತ್ತೆ ಮೂವರು ಕಾಂಗ್ರೆಸ್ ಮುಖಂಡರ ರಾಜೀನಾಮೆ

ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಬೆಂಬಲಿಸಿ, ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದ ಉಪ ಸ್ಪೀಕರ್ ಗುಲಾಂ ಹೈದರ್ ಮಲ್ಲಿಕ್ ಸೇರಿದಂತೆ ಮೂವರು ಕಾಂಗ್ರೆಸ್ ಮುಖಂಡರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ. 
ಗುಲಾಂ ನಬಿ ಆಜಾದ್ ಅವರೊಂದಿಗೆ ಕಾಂಗ್ರೆಸ್ ತೊರೆದ ಮುಖಂಡರು
ಗುಲಾಂ ನಬಿ ಆಜಾದ್ ಅವರೊಂದಿಗೆ ಕಾಂಗ್ರೆಸ್ ತೊರೆದ ಮುಖಂಡರು

ಜಮ್ಮು-ಕಾಶ್ಮೀರ: ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಬೆಂಬಲಿಸಿ, ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದ ಉಪ ಸ್ಪೀಕರ್ ಗುಲಾಂ ಹೈದರ್ ಮಲ್ಲಿಕ್ ಸೇರಿದಂತೆ ಮೂವರು ಕಾಂಗ್ರೆಸ್ ಮುಖಂಡರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ. 

ಮಲ್ಲಿಕ್ ಕಥುವಾದ ಬನಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯರಾದ ಸುಭಾಷ್ ಗುಪ್ತಾ ಮತ್ತು ಶ್ಯಾಮ್ ಲಾಲ್ ಭಗತ್ ಅವರು ಪ್ರತ್ಯೇಕವಾಗಿ ಪಕ್ಷದ ಹೈಕಮಾಂಡ್ ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂವರ ಬೆಂಬಲದ ಪತ್ರವನ್ನು ಸ್ವೀಕರಿಸಿರುವುದಾಗಿ ಗುಲಾಂ ನಬಿ ಆಜಾದ್ ಅವರ ಆಪ್ತ, ಮಾಜಿ ಸತಿವ ಜಿಎಂ ಸಾರೂರಿ ತಿಳಿಸಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹಲ್ ಲಾಲ್ ಶರ್ಮಾ,  ಗುರು ರಾಮ್,  ಮಾಜಿ ಶಾಸಕ ಬಾಲ್ವಾನ್ ಸಿಂಗ್ ಕೂಡಾ ದೆಹಲಿಯಲ್ಲಿ ಆಜಾದ್ ಅವರನ್ನು ಭೇಟಿ ಮಾಡಿದ್ದು, ನಾಳೆ  ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮಾಜಿ ಸಚಿವರು, ಶಾಸಕರು ಸೇರಿದಂತೆ ಸುಮಾರು ಒಂದು ಡಜನ್ ನಷ್ಟು ಕಾಂಗ್ರೆಸ್ ಮುಖಂಡರು ಅಲ್ಲದೇ, ನೂರಾರು ಪಂಚಾಯಿತಿ ಸದಸ್ಯರು, ಮುನ್ಸಿಪಲ್ ಕಾರ್ಪೋರೇಟರ್, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಮುಖಂಡರು ಈಗಾಗಲೇ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಆಜಾದ್ ಬಣ ಸೇರಿದ್ದಾರೆ. ಜಮ್ಮು -ಕಾಶ್ನೀರದಿಂದ ಶೀಘ್ರದಲ್ಲೇ ರಾಷ್ಟ್ರಮಟ್ಟದ ಪಕ್ಷವೊಂದು ಉದಯವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com