ಮದ್ವೆಗೆ ಮುಂಚೆ ಸೆಕ್ಸ್: ಯುವತಿಯರಿಗಿಂತ ಯುವಕರೇ ಮುಂದು - ಸಮೀಕ್ಷೆ

ಭಾರತದಂತಹ ಬಹುಪಾಲು ಸಂಪ್ರದಾಯವಾದಿ ಸಮಾಜದಲ್ಲಿ ಮದ್ವೆಗೂ ಮುಂಚೆ ಸೆಕ್ಸ್ ವಿಚಾರದಲ್ಲಿ ಜನರ ಮನಸ್ಥಿತಿ ಇನ್ನು ಅಷ್ಟಾಗಿ ಬದಲಾಗಿಲ್ಲ. ಕಳೆದ ವರ್ಷ ಶೇಕಡಾ 13.4 ರಷ್ಟು ಪುರುಷರು ಮದವೆಗೂ ಮುನ್ನ ಲೈಂಗಿಕ ಸಂಬಂಧ ಹೊಂದಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಂತಹ ಬಹುಪಾಲು ಸಂಪ್ರದಾಯವಾದಿ ಸಮಾಜದಲ್ಲಿ ಮದ್ವೆಗೂ ಮುಂಚೆ ಸೆಕ್ಸ್ ವಿಚಾರದಲ್ಲಿ ಜನರ ಮನಸ್ಥಿತಿ ಇನ್ನು ಅಷ್ಟಾಗಿ ಬದಲಾಗಿಲ್ಲ. ಕಳೆದ ವರ್ಷ ಶೇಕಡಾ 13.4 ರಷ್ಟು ಪುರುಷರು ಮದವೆಗೂ ಮುನ್ನ ಲೈಂಗಿಕ ಸಂಬಂಧ ಹೊಂದಿದ್ದು, ಶೇ. 2 ರಷ್ಟು ಅವಿವಾಹಿತ ಮಹಿಳೆಯರು ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಸಮೀಕ್ಷೆಯೊಂದು ಹೇಳಿದೆ.

NFHS-5 ಸಮೀಕ್ಷೆಯ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಅದೇ ವಯಸ್ಸಿನ ಶೇ. 95.3 ಮಹಿಳೆಯರಿಗೆ ಹೋಲಿಸಿದರೆ 23-24 ವರ್ಷ ವಯಸ್ಸಿನ ಶೇ. 77 ರಷ್ಟು ಪುರುಷರು ಯಾವತ್ತೂ ಸೆಕ್ಸ್ ಮಾಡಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ಪುರುಷರಿಗಿಂತ ಹೆಚ್ಚು ಅವಿವಾಹಿತ ಮಹಿಳೆಯರು ಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದೆ. 

15 ರಿಂದ 24 ವರ್ಷ ವಯಸ್ಸಿನ ಒಂಟಿ ಪುರುಷರು ಮತ್ತು ಮಹಿಳೆಯರ ಕುರಿತು ಈ ಸಮೀಕ್ಷೆ ಮಾಡಲಾಗಿದ್ದು, ಅದರಲ್ಲಿ 15-19 ವರ್ಷ ವಯಸ್ಸಿನ ಒಂಟಿ ಹುಡುಗಿಯರಲ್ಲಿ ಶೇ.1.3 ರಷ್ಟು ಜನ ಕಳೆದ 12 ತಿಂಗಳುಗಳಲ್ಲಿ ಲೈಂಗಿಕತೆಯನ್ನು ಹೊಂದಿದ್ದರು ಎಂದು ಹೇಳಿದೆ. ಅಲ್ಲದೆ ಶೇ, 4.4 ರಷ್ಟು ಇದೇ ವಯಸ್ಸಿನ ಪುರುಷರು ಲೈಂಗಿಕತೆಯನ್ನು ಹೊಂದಿದ್ದರು ಎಂದು ತಿಳಿಸಿದೆ.

707 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನ ಮಾಡಲಾಗಿದ್ದು, ಹುಡುಗಿಯರಿಗಿಂತ ಹದಿಹರೆಯದ ಹುಡುಗರು ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ಸಮೀಕ್ಷೆ ತೋರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com