ಬ್ಯಾಂಕ್ ಲಾಕರ್ ಪರಿಶೀಲನೆ ವೇಳೆ ಬ್ಯಾಂಕ್ ಬಳಿ ಆಗಮಿಸುತ್ತಿರುವ ಸಿಸೋಡಿಯ (ಸಂಗ್ರಹ ಚಿತ್ರ)
ದೇಶ
ಸಿಬಿಐ ಅಧಿಕಾರಿಗಳಿಂದ ಘಾಜಿಯಾಬಾದ್ ನಲ್ಲಿ ಸಿಸೋಡಿಯಾ ಬ್ಯಾಂಕ್ ಲಾಕರ್ ಪರಿಶೀಲನೆ
ಸಿಬಿಐ ಅಧಿಕಾರಿಗಳು ಘಾಜಿಯಾಬಾದ್ ನಲ್ಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಲಾಕರ್ ನ್ನು ಪರಿಶೀಲಿಸಿದ್ದಾರೆ.
ನವದೆಹಲಿ: ಸಿಬಿಐ ಅಧಿಕಾರಿಗಳು ಘಾಜಿಯಾಬಾದ್ ನಲ್ಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಲಾಕರ್ ನ್ನು ಪರಿಶೀಲಿಸಿದ್ದಾರೆ. ಘಾಜಿಯಾಬಾದ್ ನಲ್ಲಿನ ಸೆಕ್ಟರ್ 4 ವಸುಂಧರದಲ್ಲಿರುವ ಪಿಎನ್ ಬಿ ಶಾಖೆಯ ಸಿಬಿಐ ಪರಿಶೀಲನೆ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು. ಸಿಸೋಡಿಯಾ ಹಾಗೂ ಅವರ ಪತ್ನಿಯೂ ಬ್ಯಾಂಕ್ ಬಳಿ ಇದ್ದರು.
ದೆಹಲಿಯ ಹೊಸ ಮದ್ಯ ನೀತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಯಲ್ಲಿ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಪೈಕಿ ಮನೀಷ್ ಸಿಸೋಡಿಯಾ ಸಹ ಇದ್ದಾರೆ.
"ನಾಳೆ ಸಿಬಿಐ ನಮ್ಮ ಬ್ಯಾಂಕ್ ಲಾಕರ್ ನ್ನು ಪರಿಶೀಲಿಸಲು ಬರುತ್ತಿದೆ. ಆ.19 ರಂದು ನಡೆದಿದ್ದ ದಾಳಿಯಲ್ಲಿ ಸಿಬಿಐ ನವರಿಗೆ ಏನು ಸಿಗಲಿಲ್ಲ. ಲಾಕರ್ ಗಳಲ್ಲಿಯೂ ಅವರಿಗೆ ಏನೂ ಸಿಗುವುದಿಲ್ಲ, ಆದ್ದರಿಂದ ಸಿಬಿಐ ಗೆ ಸ್ವಾಗತ" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ