ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ ಬಳಿಕ 'ಬಿಜೆಪಿ ಮುಕ್ತ ಭಾರತ'ಕ್ಕೆ ಕೆಸಿಆರ್ ಕರೆ

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು, “ಬಿಜೆಪಿ ಮುಕ್ತ ಭಾರತ”ಕ್ಕೆ ಬುಧವಾರ ಕರೆ ನೀಡಿದ್ದಾರೆ.
ಕೆಸಿಆರ್ - ನಿತೀಶ್ ಕುಮಾರ್
ಕೆಸಿಆರ್ - ನಿತೀಶ್ ಕುಮಾರ್

ಪಾಟ್ನಾ: ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು, “ಬಿಜೆಪಿ ಮುಕ್ತ ಭಾರತ”ಕ್ಕೆ ಬುಧವಾರ ಕರೆ ನೀಡಿದ್ದಾರೆ.

"ತಾವು ಬಡೆ ಭಾಯ್"(ದೊಡ್ಡ ಸಹೋದರ) ಎಂದು ಪ್ರೀತಿಯಿಂದ ಕರೆಯುವ ನಿತೀಶ್ ಕುಮಾರ್ ಅವರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಸಿಆರ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ 2024ರ ಲೋಕಸಭೆ ಚುನಾವಣೆಗೆ  ಪ್ರತಿಪಕ್ಷಗಳನ್ನು ಯಾರು ಮುನ್ನಡೆಸುತ್ತಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ಜತೆಗೆ ಸೇರಿಸಲಾಗುತ್ತಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಟಿಆರ್ ಎಸ್ ಮುಖ್ಯಸ್ಥ, ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ನಮಗೆ ಯಾವುದೇ ಆತುರವಿಲ್ಲ ಎಂದು ಹೇಳಿದರು.

"ಯಾವುದೇ ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ" ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ "ಅಗ್ನಿಪಥ್" ಯೋಜನೆಯನ್ನು ತಂದಿದ್ದಕ್ಕಾಗಿ ಕೆಸಿಆರ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರೂಪಾಯಿ ಮೌಲ್ಯ ಕುಸಿತ, ರೈತರ ಪ್ರತಿಭಟನೆ, ನಿರುದ್ಯೋಗ ಮತ್ತು ಬೆಲೆ ಏರಿಕೆ ಕುರಿತು ನಿತೀಶ್ ಕುಮಾರ್ ಹಾಗೂ ಕೆಸಿಆರ್ ಇಬ್ಬರು ನಾಯಕರು ಕೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರದ ಅತಿಯಾದ ಪ್ರಚಾರ-ಪ್ರಸಾರವನ್ನು ಟೀಕಿಸಿದ ಬಿಹಾರ ಸಿಎಂ, ರಾಜ್ಯಗಳ ಅಗತ್ಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಂವೇದನೆಯ ಕೊರತೆ ಇದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com