ಶ್ರದ್ಧಾ ವಾಕರ್ ಹತ್ಯೆ ಕೇಸ್: ಅಫ್ತಾಬ್ ಮಂಪರು ಪರೀಕ್ಷೆ ಯಶಸ್ವಿ- ಅಧಿಕಾರಿಗಳು

ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಹಂತಕ ಅಫ್ತಾಬ್ ಅಮಿತ್ ಪೂನಾವಾಲನಿಗೆ ಇಂದು ಮಂಪರು  (ನಾರ್ಕೋ) ಪರೀಕ್ಷೆ ನಡೆಸಲಾಗಿದೆ.
ಹಂತಕ ಅಫ್ರಾಬ್
ಹಂತಕ ಅಫ್ರಾಬ್

ನವದೆಹಲಿ: ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಹಂತಕ ಅಫ್ತಾಬ್ ಅಮಿತ್ ಪೂನಾವಾಲನಿಗೆ ಇಂದು ಮಂಪರು  (ನಾರ್ಕೋ) ಪರೀಕ್ಷೆ ನಡೆಸಲಾಗಿದೆ. ತನಿಖೆ ಭಾಗವಾಗಿ ರೋಹಿಣಿ ಆಸ್ಪತ್ರೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪರೀಕ್ಷೆ ನಡೆಸಲಾಗಿದೆ. ಅಫ್ತಾಬ್ ನ ಮಂಪರು  ಪರೀಕ್ಷೆಯಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆತನ ಆರೋಗ್ಯದ ಪರಿಸ್ಥಿತಿ ಉತ್ತಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರೋಹಿಣಿಯಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಬೆಳಗ್ಗೆ 8-40ಕ್ಕೆ ಅಫ್ತಾಬ್ ನನ್ನು ಕರೆದೊಯ್ಯಲಾಯಿತು. ನಂತರ ಸುಮಾರು 10 ಗಂಟೆಗೆ ಮಂಪರು ಪರೀಕ್ಷೆ ಆರಂಭಿಸಲಾಯಿತು.  ಪರೀಕ್ಷೆ ನಂತರ ಆತನ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಪರೀಕ್ಷೆಗೂ ಮುನ್ನ ರಕ್ತದೊತ್ತಡ, ದೇಶದ ಉಷ್ಣಾಂಶ, ಹೃದಯದ ಬಡಿತವನ್ನು ಪರೀಕ್ಷಿಸಲಾಯಿತು. ಆತನಿಂದ ಸಹಿ ಪಡೆದ ನಂತರ ಮಂಪರು ಪರೀಕ್ಷೆ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಇದರಲ್ಲಿ ವ್ಯಕ್ತಿ ಮಾದಕ ವಸ್ತು  ಸೇವನೆ ಮಾಡಿದ್ನಾ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ.  

ಬುಧವಾರ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆಸಿದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಪೂನಾವಾಲಾ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ವಾಕರ್‌ಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ತನ್ನ ಲಿವ್-ಇನ್ ರಿಲೇಶನ್ ಶಿಫ್ ನಲ್ಲಿದ್ದ ಶ್ರದ್ಧಾ ವಾಕರ್ ಅವರನ್ನು 35 ತುಂಡುಗಳನ್ನಾಗಿ ಮಾಡಿ ಅನೇಕ ದಿನಗಳ ವರೆಗೂ ತನ್ನ ನಿವಾಸದಲ್ಲಿ ಫ್ರಿಡ್ಜ್ ನಲ್ಲಿಟ್ಟು ಒಂದೊಂದಾಗಿಯೇ ಮೃತದೇಹ ವಿಲೇವಾರಿ ಸಂಬಂಧ ನವೆಂಬರ್ 12 ರಂದು ಅಫ್ತಾಬ್ ನನ್ನು ಪೊಲೀಸರು ಬಂಧಿಸಿದ್ದರು. ನಂತರ ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ನಂತರ ಅದು ವಿಸ್ತರಣೆಯಾಗಿತ್ತು. ನವೆಂಬರ್ 26 ರಂದು ನ್ಯಾಯಾಲಯ ಆತನನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com