ದೆಹಲಿ ಲಿಕ್ಕರ್ ನೀತಿ ಹಗರಣ: ತೆಲಂಗಾಣ ಸಿಎಂ ಪುತ್ರಿ ಕವಿತಾ ಹಾಗೂ ಇತರರಿಂದ ಆಪ್ ಸರ್ಕಾರಕ್ಕೆ 100 ಕೋಟಿ ರೂ. ಕಿಕ್ ಬ್ಯಾಕ್; ಇಡಿ ವರದಿ ಸಲ್ಲಿಕೆ
ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದೆ. ಅದು ಎಷ್ಟೆಂದರೆ ಕನಿಷ್ಟ 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು.
Published: 01st December 2022 09:41 AM | Last Updated: 01st December 2022 01:52 PM | A+A A-

ತೆಲಂಗಾಣ ಸಿಎಂ ಪುತ್ರಿ ಕವಿತಾ(ಸಂಗ್ರಹ ಚಿತ್ರ)
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿ ವಿಜಯ್ ನಾಯರ್ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ ಮಾಡಿದೆ. ಅದು ಎಷ್ಟೆಂದರೆ ಕನಿಷ್ಟ 100 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು. ಅದು, ಶರತ್ ರೆಡ್ಡಿ, ಕೆ ಕವಿತ ಮತ್ತು ಮಗುಂತ ಶ್ರೀನಿವಾಸುಲು ರೆಡ್ಡಿ ಒಡೆತನದ ಸೌತ್ ಗ್ರೂಪ್ ನಿಂದ 100 ಕೋಟಿ ರೂಪಾಯಿಗಳಷ್ಟು ಲಂಚ ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರ ಪರವಾಗಿ ಅವರಲ್ಲಿ ಕೆಲವರು ಸರ್ಕಾರದಲ್ಲಿದ್ದು ವಿಜಯ್ ನಾಯರ್ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಂದು ವಿಶೇಷವೆಂದರೆ ಜಾರಿ ನಿರ್ದೇಶನಾಲಯ ತನಿಖೆ ವರದಿಯಲ್ಲಿ ಇದೇ ಮೊದಲ ಬಾರಿಗೆ ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಪಕ್ಷದ ಸಂಸ್ಥಾಪಕ ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಹೆಸರು ಪ್ರಸ್ತಾಪವಾಗಿದೆ. ಇವರು ತೆಲಂಗಾಣ ವಿಧಾನಪರಿಷತ್ತಿನ ಸದಸ್ಯೆ ಕೂಡ ಆಗಿದ್ದಾರೆ.
ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಬಂಧನಕ್ಕೀಡಾಗಿರುವ ಉದ್ಯಮಿ ಅಮಿತ್ ಅರೋರ ಅವರ ಕಸ್ಟಡಿಯನ್ನು ಕೇಳಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA) ತನಿಖೆಯಿಂದ ದೆಹಲಿ ಅಬಕಾರಿ ನೀತಿ 2021-22ರಲ್ಲಿ ಹಗರಣವಾಗಿದ್ದು ಬೆಳಕಿಗೆ ಬಂದಿದ್ದು ಅದರಲ್ಲಿ ಆಪ್ ನಾಯಕರ ಪಾತ್ರವಿದೆ, ಅವರಲ್ಲಿ ಕೆಲವರು ದೆಹಲಿ ಸರ್ಕಾರದ ಭಾಗವಾಗಿದ್ದಾರೆ, ರಾಜ್ಯದ ಅಬಕಾರಿ ಖಜಾನೆಯಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ: 'ಬಿಜೆಪಿ ಸೇರಲು ಆ ಪಕ್ಷದ ನಾಯಕರು ಆಫರ್ ನೀಡಿದ್ದರು, ಆದರೆ...'; ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ
ದೆಹಲಿ ಅಬಕಾರಿ ನೀತಿಯನ್ನು ಹಲವು ಲೋಪದೋಷಗಳ ನಡುವೆ ಜಾರಿಗೆ ತರಲಾಗಿದ್ದು ಅದರ ಮೂಲಕ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ. ಇದು ಹಿಂಬಾಗಿಲಿನ ಮೂಲಕ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ, ಅತಿಯಾದ ಸಗಟು (12%) ಮತ್ತು ಹೆಚ್ಚಿನ ಚಿಲ್ಲರೆ (185%) ಲಾಭಾಂಶವನ್ನು ನೀಡಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದೆ.
ಮದ್ಯ ಮಾರಾಟದಲ್ಲಿ ಸಗಟು ವ್ಯಾಪಾರಿಗಳಿಗೆ ಶೇಕಡಾ 13ರಷ್ಟು ಲಾಭಾಂಶವನ್ನು ಎಎಪಿ ನಾಯಕರಿಗೆ ಕಿಕ್‌ಬ್ಯಾಕ್ ನೀಡಲಾಗಿದೆ. ಇಲ್ಲಿಯವರೆಗೆ ನಡೆಸಲಾದ ತನಿಖೆಯ ಪ್ರಕಾರ, ವಿಜಯ್ ನಾಯರ್, ಆಪ್ ನಾಯಕರ ಪರವಾಗಿ ಸೌತ್ ಗ್ರೂಪ್ ಎಂಬ ಗುಂಪಿನಿಂದ ಕನಿಷ್ಠ 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಬಂಧಿತ ಅಮಿತ್ ಅರೋರಾ ಬಹಿರಂಗಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.