ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್ ಗೆ ಹೈಕೋರ್ಟ್ ನೋಟಿಸ್

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪ ಮುಕ್ತಗೊಂಡಿರುವುದರ ವಿರುದ್ಧ ದೆಹಲಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 
ಸುನಂದಾ ಪುಷ್ಕರ್, ಶಶಿ ತರೂರ್ ಸಾಂದರ್ಭಿಕ ಚಿತ್ರ
ಸುನಂದಾ ಪುಷ್ಕರ್, ಶಶಿ ತರೂರ್ ಸಾಂದರ್ಭಿಕ ಚಿತ್ರ

ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪ ಮುಕ್ತಗೊಂಡಿರುವುದರ ವಿರುದ್ಧ ದೆಹಲಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ತನ್ನ ಪತ್ನಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್ 18 ರಂದು ಶಶಿ ತರೂರ್ ಅವರನ್ನು ಪಾಟಿಯಾಲ ಹೌಸ್ ಕೋರ್ಟ್ ಆರೋಪ ಮುಕ್ತಗೊಳಿಸಿತ್ತು.

 'ಪರಿಷ್ಕೃತ ಅರ್ಜಿ ಭರ್ತಿಯಲ್ಲಿ ವಿಳಂಬತೆ ಕೋರಿ ದೆಹಲಿ ಪೊಲೀಸರು ಅರ್ಜಿ ಸಲ್ಲಿಸಿದ ನಂತರ ದೆಹಲಿ ಹೈಕೋರ್ಟ್ ಶಶಿ ತರೂರ್ ಗೆ ನೋಟಿಸ್ ಕಳುಹಿಸಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 7, 2023ಕ್ಕೆ ನಿಗದಿಪಡಿಸಿದೆ.

ಶಶಿ ತರೂರ್ ಪರ ವಾದಿಸಿದ ಹಿರಿಯ ವಕೀಲ ವಿಕಾಸ್ ಪಾಶ್ವ, ಕೆಳ ನ್ಯಾಯಾಲಯಗಳು ನೀಡಿದ ವಿವಿಧ ಆದೇಶಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟರು. ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿತರೂರ್ ಅವರನ್ನು ದೆಹಲಿ ಕೋರ್ಟ್ 2021, ಆಗಸ್ಟ್ 18 ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com