ಮಧ್ಯ ಪ್ರದೇಶದಲ್ಲಿ 11ನೇ ದಿನಕ್ಕೆ ಕಾಲಿಟ್ಟ ರಾಹುಲ್ ಭಾರತ್ ಜೋಡೋ ಯಾತ್ರೆ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಧ್ಯ ಪ್ರದೇಶದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಆಗರ್ ಮಾಲ್ವಾ ಜಿಲ್ಲೆಯಿಂದ ಶನಿವಾರ ಪುನರ್ ಆರಂಭವಾಯಿತು.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಆಗರ್ ಮಾಲ್ವಾ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಧ್ಯ ಪ್ರದೇಶದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಆಗರ್ ಮಾಲ್ವಾ ಜಿಲ್ಲೆಯಿಂದ ಶನಿವಾರ ಪುನರ್ ಆರಂಭವಾಯಿತು.

ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಆಗರ್ ಮಾಲ್ವಾದ ಮಹುದಿಯಾ ಗ್ರಾಮದ ಬಸ್ ನಿಲ್ದಾಣದಲ್ಲಿ ಯಾತ್ರೆ ಆರಂಭವಾಯಿತು. ಇದು ಈವರೆಗೂ ರಾಹುಲ್ ನಡೆಸುತ್ತಿರುವ ಒಟ್ಟಾರೇ  87 ದಿನದ ಯಾತ್ರೆಯಾಗಿದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿತ್ತು.

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಟಿ.ಎಂ. ಕೃಷ್ಣ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಅಮ್ಲಾ ಗ್ರಾಮದಲ್ಲಿ ಯಾತ್ರೆಗೆ ವಿರಾಮ ನೀಡಲಾಗಿದ್ದು, ಮಧ್ಯಾಹ್ನ 3-30ಕ್ಕೆ ಸುಸ್ನೆರ್ ಟೌನ್ ನ ಜೈನ್ ಮಂದಿರದಿಂದ ಆರಂಭವಾಗಲಿದ್ದು, ಆಗರ್ ಮಾಲ್ವಾದ ಮಂಗೇಶ್ ಪುರ್ ಚೌರಾ ತಲುಪಲಿದೆ.

ಲಾಲಾ ಖೇಡಿ ಗ್ರಾಮದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡವರು ರಾತ್ರಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯಾತ್ರೆ ಡಿಸೆಂಬರ್ 4 ರಂದು ರಾಜಸ್ಥಾನ ತಲುಪಲಿದೆ. ಅದಕ್ಕೂ ಮುನ್ನ ಪೂರ್ವ ಮಧ್ಯ ಪ್ರದೇಶದ ಮಾಲ್ವಾ- ನಿಮಾರ್ ವಲಯದಲ್ಲಿ 380 ಕಿ.ಮೀ. ದೂರ ಕ್ರಮಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com