ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಪತ್ರ: ಲಷ್ಕರ್ 'ಹಿಟ್‌ಲಿಸ್ಟ್'ನಲ್ಲಿ 56 ಮಂದಿ!

ಲಷ್ಕರ್ ನಡೆಸುತ್ತಿರುವ ಸಾಮಾಜಿಕ ಮಾಧ್ಯಮ ಹ್ಯಾಂಡಲ್ 'ಕಾಶ್ಮೀರ ಫೈಟ್' ಮತ್ತೊಮ್ಮೆ ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಹಾಕಿದೆ. 
ಕಾಶ್ಮೀರಿ ಪಂಡಿತರು
ಕಾಶ್ಮೀರಿ ಪಂಡಿತರು

ಶ್ರೀನಗರ: ಲಷ್ಕರ್ ನಡೆಸುತ್ತಿರುವ ಸಾಮಾಜಿಕ ಮಾಧ್ಯಮ ಹ್ಯಾಂಡಲ್ 'ಕಾಶ್ಮೀರ ಫೈಟ್' ಮತ್ತೊಮ್ಮೆ ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತರಿಗೆ ಜೀವ ಬೆದರಿಕೆ ಹಾಕಿದೆ. 

ಭಯೋತ್ಪಾದಕ ಸಂಘಟನೆಯು ತಮ್ಮ ಗುರಿಯಾಗಿರುವ 56 ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿಯವರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿರುವುದಾಗಿ ಭಯೋತ್ಪಾದಕ ಸಂಘಟನೆ ಹೇಳಿದೆ.

ಈಗಾಗಲೇ ಕಾಶ್ಮೀರಿ ಪಂಡಿತ ಉದ್ಯೋಗಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಬೆದರಿಕೆ ಪತ್ರಗಳು ಭಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಕಾಶ್ಮೀರಿ ಪಂಡಿತ್ ನೌಕರರು, '50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೆಸರಿಸಲಾಗಿದೆ. ಈ ಅಧಿಕೃತ ದಾಖಲೆಗಳು ಭಯೋತ್ಪಾದಕರಿಗೆ ಹೇಗೆ ತಲುಪಿದವು ಎಂಬುದು ಇಲ್ಲಿನ ಯಕ್ಷ ಪ್ರಶ್ನೆಯಾಗಿದೆ.

ಪತ್ರದಿಂದಾಗಿ ಉದ್ಯೋಗಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ
ಕಾಶ್ಮೀರಿ ಪಂಡಿತರೊಬ್ಬರು, ಉದ್ಯೋಗಿಗಳ ಹೆಸರನ್ನು ಪಟ್ಟಿಯಲ್ಲಿ ಬರೆದಿರುವುದು ತುಂಬಾ ಆಘಾತಕಾರಿಯಾಗಿದೆ. ನಾವು ಈಗಾಗಲೇ ಭಯದಿಂದ ಬದುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ತನಿಖಾ ಸಮಿತಿ ರಚಿಸಬೇಕು. ಸುಮಾರು ಏಳು ತಿಂಗಳಿಂದ ವರ್ಗಾವಣೆಗೆ ಒತ್ತಾಯಿಸುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com