ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ: ರಾಹುಲ್ ಚಾಯ್ ಪೇ ಚರ್ಚಾ, ಮಾಜಿ ಸಂಸದ ರಘುವೀರ್ ಮೀನಾ ಅಸ್ವಸ್ಥ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ಜಲವಾರ್ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು.
Published: 05th December 2022 12:31 PM | Last Updated: 05th December 2022 02:27 PM | A+A A-

ರಾಹುಲ್ ಗಾಂಧಿ
ಜಲವಾರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ಜಲವಾರ್ ಜಿಲ್ಲೆಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು.
ರಾಹುಲ್ ಗಾಂಧಿ ಅವರ 89ನೇ ದಿನದ ಯಾತ್ರೆಯೂ ರಾಜಸ್ಥಾನ- ಮಧ್ಯ ಪ್ರದೇಶ ಗಡಿ ಪ್ರದೇಶ ಝಲ್ರಾಪಟನ್‌ನಲ್ಲಿ ಕಾಳಿ ತಲೈನಿಂದ ಶುರುವಾಯಿತು. 13 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಕೊರೆಯುವ ಚಳಿಯಲ್ಲೂ ಟಿ- ಶರ್ಟ್ ಮತ್ತು ಶೂ ನೊಂದಿಗೆ ರಾಹುಲ್ ಗಾಂಧಿ ಬೆಳಗ್ಗೆ 6-10ಕ್ಕೆ ಯಾತ್ರೆಯನ್ನು ಆರಂಭಿಸಿದರೆ, ಪಕ್ಷದ ಇತರ ಮುಖಂಡರು ಜಾಕೆಟ್ ಧರಿಸಿದ್ದರು.
ಯಾತ್ರೆ ವೇಳೆಯಲ್ಲಿ ರಾಹುಲ್ ಗಾಂಧಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಯಾತ್ರೆ ಸೂಕ್ತವಾಗಿದೆ ಎಂದು ಕರೆದರು. ನಂತರ ಡಾಬಾವೊಂದರಲ್ಲಿ ರಾಹುಲ್ ಚಹಾ ಸೇವಿಸಿದರು. ಈ ವೇಳೆ ಮಾಜಿ ಸಂಸದ ರಘುವೀರ್ ಮೀನಾ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಜಲವಾರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು 14 ಕಿ.ಮೀ ಕ್ರಮಿಸಿದ ನಂತರ ಪಾದಯಾತ್ರೆ ಬಲಿಬೋರ್ಡಾ ಚೌರಾದಲ್ಲಿ ಸ್ಥಗಿತಗೊಂಡಿತು.
ಇದನ್ನೂ ಓದಿ: ಮೆಚ್ಚುಗೆಯಿಂದ ವೈಯಕ್ತಿಕ ದಾಳಿಗೆ: ಮಾಧ್ಯಮಗಳು ತಮ್ಮ ವಿಷಯದಲ್ಲಿ ಬದಲಾಗಿದ್ದು ಹೇಗೆ? ರಾಹುಲ್ ಗಾಂಧಿ ಹೇಳಿದ್ದು ಹೀಗೆ...
ಮಧ್ಯಾಹ್ನ 3.30ಕ್ಕೆ ಭೋಜನ ನಂತರ ನಹರ್ಡಿ ಪ್ರದೇಶದಿಂದ ಯಾತ್ರೆ ಪುನರ್ ಆರಂಭವಾಗಲಿದೆ. ಯಾತ್ರೆಯನ್ನು ನಿಧಾನಗೊಳಿಸಬೇಡಿ, ಅದ್ಬುತವಾಗುವಂತೆ ಮಾಡಿ ಎಂದು ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಲ್ಲಿ ಮನವಿ ಮಾಡಿದೆ.
ಭಾರತ್ ಜೋಡೋ ಯಾತ್ರೆಯು ಐತಿಹಾಸಿಕ ನಾಡು ರಾಜಸ್ಥಾನ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂದು ಪಕ್ಷ ಟ್ವೀಟ್ ಮಾಡಿದೆ.
#BharatJodoYatra को अभूतपूर्व जनसमर्थन मिल रहा है...
— Congress (@INCIndia) December 5, 2022
दिलों को जोड़ने का लक्ष्य लिए यात्रा सफलता के कदमों को चूम रही है।
जय जय राजस्थान... pic.twitter.com/G4OTgiQPoi
ಡಿಸೆಂಬರ್ 21 ರಂದು ಹರಿಯಾಣ ಪ್ರವೇಶಿಸುವ ಮೊದಲು 17 ದಿನಗಳ ಕಾಲ ಯಾತ್ರೆಯು ಜಲಾವರ್, ಕೋಟಾ, ಬುಂಡಿ, ಸವಾಯಿ ಮಾಧೋಪುರ್, ದೌಸಾ ಮತ್ತು ಅಲ್ವಾರ್ ಜಿಲ್ಲೆಗಳ ಮೂಲಕ ಸುಮಾರು 500 ಕಿಲೋಮೀಟರ್ ದೂರ ಕ್ರಮಿಸಲಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಡಿಸೆಂಬರ್ 15 ರಂದು ದೌಸಾದಲ್ಲಿ ಲಾಲ್ಸೋಟ್ ಮತ್ತು ಡಿಸೆಂಬರ್ 19 ರಂದು ಅಲ್ವಾರ್‌ನ ಮಳಖೇಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.