ಲಾಲು ಪ್ರಸಾದ್ ಯಾದವ್ ಗೆ ಕಿಡ್ನಿ ದಾನ; ರೋಹಿಣಿ ಆಚಾರ್ಯ ಗುಣಗಾನ ಮಾಡಿದ ಬಿಜೆಪಿ ನಾಯಕ
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜೀವ ನೀಡಿರುವ ಅವರ ಪುತ್ರಿ ರೋಹಿಣಿ ಆಚಾರ್ಯ ಅವರನ್ನು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೊಂಡಾಡಿದ್ದಾರೆ.
Published: 06th December 2022 01:46 PM | Last Updated: 06th December 2022 01:48 PM | A+A A-

ಲಾಲು ಪ್ರಸಾದ್ ಯಾದವ್ ಗೆ ಕಿಡ್ನಿ ದಾನ ಮಾಡಿದ ರೋಹಿಣಿ ಆಚಾರ್ಯ
ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜೀವ ನೀಡಿರುವ ಅವರ ಪುತ್ರಿ ರೋಹಿಣಿ ಆಚಾರ್ಯ ಅವರನ್ನು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಕೊಂಡಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಿರಿರಾಜ್ ಸಿಂಗ್, 'ರೋಹಿಣಿ ಆಚಾರ್ಯ ಆದರ್ಶ ಪುತ್ರಿ, ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ. ಮುಂದಿನ ಪೀಳಿಗೆಗೆ ನೀವು ಸ್ಫೂರ್ತಿಯಾಗಿದ್ದೀರಿ ಎಂದಿದ್ದಾರೆ.
“बेटी हो तो रोहणी आचार्य जैसी” गर्व है आप पर… आप उदाहरण होंगी आने वाले पीढ़ियों के लिए । pic.twitter.com/jzg3CTSmht
— Shandilya Giriraj Singh (@girirajsinghbjp) December 5, 2022
ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಾಪೂರ್ ನಲ್ಲಿ ನಿನ್ನೆ ಕಿಡ್ನಿ ವರ್ಗಾವಣೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು. ಆಪರೇಷನ್ ನಂತರ ರೋಹಿಣಿಯೊಂದಿಗೆ ಇರುವ ಚಿತ್ರವನ್ನು ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಇದು ಕೇವಲ ಸಣ್ಣ ಮಾಂಸದ ತುಂಡು ಎಂದು ತಂದೆಗೆ ಕಿಡ್ನಿ ನೀಡಲು ನಿರ್ಧರಿಸಿದೆ: ಲಾಲು ಪ್ರಸಾದ್ ಯಾದವ್ ಪುತ್ರಿ
ಆಸ್ಪತ್ರೆಯ ಐಸಿಯುನಲ್ಲಿ ತಂದೆ ಹಾಗೂ ಮಗಳು ಇಬ್ಬರು ಆರೋಗ್ಯದಿಂದ ಇರುವುದಾಗಿ ಅವರು ಟ್ವೀಟ್ ನಲ್ಲಿ ತಿಳಿಸಿದರು. 40 ವರ್ಷದ ಆಚಾರ್ಯ ತನ್ನ 74 ವರ್ಷದ ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ಮಾಡಿದ್ದಾರೆ.