ಒರೆವಾ ಮಾಲೀಕರು ಮುಕ್ತವಾಗಿ ಓಡಾಡುತ್ತಿದ್ದಾರೆ; ನನ್ನನ್ನು ಬಂಧಿಸಿರುವುದು ವಿಪರ್ಯಾಸ: ಸಾಕೇತ್ ಗೋಖಲೆ

135ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಒರೆವಾ ಕಂಪನಿಯ ಮಾಲೀಕರು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಗುಜರಾತ್ ಪೊಲೀಸರು ನನ್ನನ್ನು ಬಂಧಿಸಿರುವುದು ವಿಪರ್ಯಾಸ ಎಂದು ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ಸಾಕೇತ್...
ಸಾಕೇತ್ ಗೋಖಲೆ
ಸಾಕೇತ್ ಗೋಖಲೆ

ಅಹಮದಾಬಾದ್: 135ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಒರೆವಾ ಕಂಪನಿಯ ಮಾಲೀಕರು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಗುಜರಾತ್ ಪೊಲೀಸರು ನನ್ನನ್ನು ಬಂಧಿಸಿರುವುದು ವಿಪರ್ಯಾಸ ಎಂದು ತೃಣಮೂಲ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಮಂಗಳವಾರ ಹೇಳಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಗೋಖಲೆ, ಒರೆವಾ ಮಾಲೀಕ "ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮೋರ್ಬಿಗೆ ಭೇಟಿ ನೀಡಿದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನನ್ನನ್ನು ಬಂಧಿಸಿರುವುದು "ವಿಪರ್ಯಾಸ" ಎಂದಿದ್ದಾರೆ.

135 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಸೇತುವೆ ಕುಸಿತ ದುರಂತದ ನಂತರ ಮೋರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಪ್ರಕಟವಾಗಿದ್ದ ಸುಳ್ಳು ಸುದ್ದಿಯನ್ನು ಟ್ವೀಟ್‌ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಗೋಖಲೆಯನ್ನು ಬಂಧಿಸಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ಅಹಮದಾಬಾದ್ ಸೈಬರ್ ಕ್ರೈಂ ಸೆಲ್‌ ಪೊಲೀಸರು ತೃಣಮೂಲ ವಕ್ತಾರರನ್ನು  ಬಂಧಿಸಿದ್ದಾರೆ ಎಂದು ಸೈಬರ್ ಕ್ರೈಂನ ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ಜಿತೇಂದ್ರ ಯಾದವ್ ತಿಳಿಸಿದ್ದಾರೆ.

ಗೋಖಲೆ ಅವರು ಪತ್ರಿಕೆಯ ಕಟಿಂಗ್‌ಗಳನ್ನು ಹಂಚಿಕೊಂಡಿದ್ದಾರೆ. ಗುಜರಾತಿನ ತೂಗು ಸೇತುವೆ ಕುಸಿದು 135 ಮಂದಿ ಸಾವಿಗೀಡಾದ ಬಳಿಕ ಮೊರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ 30 ಕೋಟಿ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com