ಗುಜರಾತ್ ಚುನಾವಣೆ ಮತ ಎಣಿಕೆ: ಮೋರ್ಬಿ ಸೇತುವೆ ದುರಂತ ವೇಳೆ ನದಿಗೆ ಹಾರಿದ್ದ ಬಿಜೆಪಿ ಮುಖಂಡ ಮುನ್ನಡೆ
ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊರ್ಬಿ ಸೇತುವೆ ದುರಂತ ವೇಳೆಯಲ್ಲಿ ಜನರನ್ನು ರಕ್ಷಿಸಲು ಮಚ್ಚು ನದಿಗೆ ಹಾರಿ ಪ್ರಮುಖ ಸುದ್ದಿಯಾಗಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ 10, 156 ಮತಗಳ ಮುನ್ನಡೆ ಸಾಧಿಸಿದ್ದಾರೆ.
Published: 08th December 2022 11:25 AM | Last Updated: 08th December 2022 01:48 PM | A+A A-

ಕಾಂತಿಲಾಲ್ ಅಮೃತಿಯಾ
ಮೋರ್ಬಿ: ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊರ್ಬಿ ಸೇತುವೆ ದುರಂತ ವೇಳೆಯಲ್ಲಿ ಜನರನ್ನು ರಕ್ಷಿಸಲು ಮಚ್ಚು ನದಿಗೆ ಹಾರಿ ಪ್ರಮುಖ ಸುದ್ದಿಯಾಗಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ 10, 156 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಮೃತಿಯಾ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜಯಂತಿ ಜೀರಾಜ್ ಬಾಯಿ ಪಟೇಲ್ ಮತ್ತು ಎಎಪಿಯಿಂದ ಪಂಕಜ್ ರಂಸಾರಿಯಾ ಎದುರಾಳಿಯಾಗಿದ್ದಾರೆ. ಅಮೃತಿಯಾ ಐದು ಬಾರಿಗೆ ಶಾಸಕರಾಗಿದ್ದರು. ಮೋರ್ಬಿ ಸೇತುವೆ ದುರಂತ ವೇಳೆ ಜನರನ್ನು ಕಾಪಾಡಲು ನದಿಗೆ ಹಾರುವ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಇದನ್ನೂ ಓದಿ: Live-ಚುನಾವಣೆ ಫಲಿತಾಂಶ: ಗುಜರಾತ್ ನಲ್ಲಿ ನಾಗಾಲೋಟದಲ್ಲಿ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಉಚಿತವಾಗಿ ಔಷಧ ವಿತರಣೆ ಜೊತೆಗೆ ನಗರದಾದ್ಯಂತ 13 ಕಡೆಗಳಲ್ಲಿ 3,000 ಹಾಸಿಗೆಯುಳ್ಳ ವೈದ್ಯಕೀಯ ಶಿಬಿರ ಆಯೋಜಿಸಿದ್ದರು. ಇವರ ಮನೆ ಹತ್ತಿರ ಸ್ಥಳೀಯರಿಗಾಗಿ ಗಾರ್ಡನ್ ನಿರ್ಮಿಸಿದ್ದಾರೆ.