ದೇಶದಲ್ಲಿ ಕೋಟ್ಯಂತರ ಜನ ಕುಡಿಯುತ್ತಾರೆ, ಅವರು ಸಾಯಬೇಕೇ?: ನಿತೀಶ್ ಕುಮಾರ್‌ಗೆ ಸುಶೀಲ್ ಮೋದಿ ಪ್ರಶ್ನೆ
ದೇಶದಲ್ಲಿ ಕೋಟ್ಯಂತರ ಜನ ಮದ್ಯ ಸೇವಿಸುತ್ತಾರೆ, ಅವರೆಲ್ಲರೂ ಸಾಯಬೇಕೇ? ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರುವಾರ ಪ್ರಶ್ನಿಸಿದ್ದಾರೆ.
Published: 15th December 2022 07:22 PM | Last Updated: 19th December 2022 11:05 AM | A+A A-

ಸುಶೀಲ್ ಮೋದಿ
ನವದೆಹಲಿ: ದೇಶದಲ್ಲಿ ಕೋಟ್ಯಂತರ ಜನ ಮದ್ಯ ಸೇವಿಸುತ್ತಾರೆ, ಅವರೆಲ್ಲರೂ ಸಾಯಬೇಕೇ? ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರುವಾರ ಪ್ರಶ್ನಿಸಿದ್ದಾರೆ.
ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತಪಟ್ಟ ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು "ಜೋ ಪಿಯೇಗಾ, ವೋ ಮರೇಗಾ"(ಯಾರು ಕುಡಿಯುತ್ತಾರೋ ಅವರು ಸಾಯುತ್ತಾರೆ) ಎಂದು ಹೇಳಿದ್ದರು.
ಇದನ್ನು ಓದಿ: ನೀನು ಕುಡಿದರೆ ನೀನೇ ಸಾಯುತ್ತೀಯಾ: ನಕಲಿ ಮದ್ಯ ದುರಂತಕ್ಕೆ ಬಿಹಾರ ಸಿಎಂ ಬೇಸರ
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಮದ್ಯಪಾನ ಮಾಡುವವರು "ಮಹಾಪಾಪಿ"(ದೊಡ್ಡ ಪಾಪಿಗಳು) ಮತ್ತು ಅವರು ಭಾರತೀಯರಾಗಲು ಸಾಧ್ಯವಿಲ್ಲ ಎಂದು ಈ ಹಿಂದೆಯೂ ನಿತೀಶ್ ಕುಮಾರ್ ಹೇಳಿದ್ದರು. ಈಗ ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಜನರು ಸಾಯುತ್ತಿರುವಾಗ ಮುಖ್ಯಮಂತ್ರಿಗಳ ಇಂತಹ ಹೇಳಿಕೆ ಅನುಚಿತ ಎಂದಿದ್ದಾರೆ.
ಇದನ್ನು ಓದಿ: ಬಿಹಾರ: ನಕಲಿ ಮದ್ಯ ಸೇವನೆ, ಮೃತರ ಸಂಖ್ಯೆ 39ಕ್ಕೆ ಏರಿಕೆ
ಬಿಹಾರದಲ್ಲಿ ಅಕ್ರಮ ಮದ್ಯ ವ್ಯಾಪಾರವು "ಸಮಾನಾಂತರ ಆರ್ಥಿಕತೆ"ಯಾಗಿ ಮಾರ್ಪಟ್ಟಿದೆ ಎಂದು ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಆರೋಪಿಸಿದ್ದಾರೆ.