ಪವಾರ್‌ಗೆ ಜೀವ ಬೆದರಿಕೆ: ತನ್ನ ಪತ್ನಿ ಎನ್‌ಸಿಪಿ ಕಾರ್ಯಕರ್ತನೊಂದಿಗೆ ಓಡಿಹೋಗಿದ್ದಾಳೆ ಎಂದ ಆರೋಪಿ!
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ಮುಂಬೈ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತನ್ನ ಪತ್ನಿ ಎನ್‌ಸಿಪಿ...
Published: 15th December 2022 05:51 PM | Last Updated: 15th December 2022 05:51 PM | A+A A-

ಶರದ್ ಪವಾರ್
ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ಮುಂಬೈ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತನ್ನ ಪತ್ನಿ ಎನ್‌ಸಿಪಿ ಕಾರ್ಯಕರ್ತನೊಂದಿಗೆ ಓಡಿಹೋದ ನಂತರ ಮತ್ತು ಪಕ್ಷದ ಮುಖ್ಯಸ್ಥರು ಈ ವಿಷಯದಲ್ಲಿ ಮಧ್ಯಪ್ರವೇಶಿಸದ ಕಾರಣ ಆಕ್ರೋಶಗೊಂಡು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
46 ವರ್ಷದ ಆರೋಪಿ ಬಿಹಾರಕ್ಕೆ ಸ್ಥಳಾಂತರಗೊಳ್ಳುವ ಮೊದಲು 10 ವರ್ಷಗಳ ಕಾಲ ತನ್ನ ಪತ್ನಿಯೊಂದಿಗೆ ಪುಣೆಯಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಶರದ್ ಪವಾರ್‌ಗೆ ಕೊಲೆ ಬೆದರಿಕೆ ಹಾಕಿದ ಬಿಹಾರದ ವ್ಯಕ್ತಿ ಬಂಧನ
ಪವಾರ್ ಅವರ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈ ಪೊಲೀಸರು ಆರೋಪಿಯನ್ನು ಪಾಟ್ನಾದಿಂದ ಬುಧವಾರ ಬಂಧಿಸಿದ್ದಾರೆ.
"ಪ್ರಕರಣದಲ್ಲಿ ಆತನ ವಿಚಾರಣೆಯ ನಂತರ, ಆರೋಪಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ" ಎಂದು ಅವರು ಹೇಳಿದ್ದಾರೆ.
"ವಿಚಾರಣೆಯ ಸಮಯದಲ್ಲಿ, ಆರೋಪಿ ಬಿಹಾರಕ್ಕೆ ಸ್ಥಳಾಂತರಗೊಳ್ಳುವ ಮೊದಲು ತನ್ನ ಹೆಂಡತಿಯೊಂದಿಗೆ 10 ವರ್ಷಗಳ ಕಾಲ ಪುಣೆಯಲ್ಲಿ ವಾಸಿಸುತ್ತಿದ್ದ. ಈ ವೇಳೆ ತನ್ನ ಪತ್ನಿ ಎನ್ ಸಿಪಿ ಕಾರ್ಯಕರ್ತನೊಂದಿಗೆ ಓಡಿಹೋಗಿ ಮದುವೆಯಾದಳು ಎಂದು ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.