ಇಂಡಿಗೋ ವಿಮಾನದಲ್ಲಿ ಮಾರ್ಗ ಮಧ್ಯ ಪ್ರಯಾಣಿಕರು, ಸಿಬ್ಬಂದಿ ನಡುವೆ ಮಾತಿನ ಚಕಮಕಿ: ಘಟನೆ ಕುರಿತು ಡಿಜಿಸಿಎ ವಿಚಾರಣೆ

ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ಇಂಡಿಗೋ ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ಆಹಾರ ಆಯ್ಕೆ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.
ಇಂಡಿಗೋ ವಿಮಾನ ಸಾಂದರ್ಭಿಕ ಚಿತ್ರ
ಇಂಡಿಗೋ ವಿಮಾನ ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ಇಂಡಿಗೋ ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ಆಹಾರ ಆಯ್ಕೆ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.

ಇಸ್ತಾನ್ ಬುಲ್ ನಿಂದ ದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ತನಿಖೆ ವಿಚಾರಣೆ ಆರಂಭಿಸಿದೆ. ಡಿಸೆಂಬರ್ 16 ರಂದು ವಿಮಾನದಲ್ಲಿ ನಡೆದಿರುವ ಈ ಮಾತಿನ ಚಕಮಕಿಯ ಘಟನೆ ವಿಡಿಯೋ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 

'ನಿಮ್ಮಿಂದ ನಮ್ಮ ಸಿಬ್ಬಂದಿ ಆಳುತ್ತಿರುವುದಾಗಿ ಇಂಡಿಗೋ ವಿಮಾನದ ಸಿಬ್ಬಂದಿ ಜೋರಾಗಿ ಪ್ರಯಾಣಿಕರಿಗೆ ಹೇಳುವ ದೃಶ್ಯ ವಿಡಿಯೋದಲ್ಲಿದೆ. ನೀವು ಪ್ರಯಾಣಿಕರು ಸೇವಕರು ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ. ಆಗ ನಾನು ಸಿಬ್ಬಂದಿ, ನಿಮ್ಮ ಸೇವಕಿ ಅಲ್ಲ, ಅಂತಾ ಸಿಬ್ಬಂದಿ ಹೇಳುತ್ತಾರೆ.  ಏಕೆ ಅಳುತ್ತಿದ್ದೀಯಾ, ನಿಲ್ಲಿಸು ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ. ಸುಮಾರು ಒಂದು ನಿಮಿಷ ಅವಧಿಯ ಕ್ಲಿಪ್ ನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ಆಹಾರದ ಆಯ್ಕೆ ವಿಚಾರವಾಗಿ ಈ ಜಗಳ ನಡೆದಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com