ಭೂಪಾಲ್: ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಸಾಂತಾಕ್ಲಾಸ್ ವೇಷ ಧರಿಸುವಂತೆ ಮತ್ತು ಅವರ ಪೋಷಕರ ಅನುಮತಿಯಿಲ್ಲದೆ ಕ್ರಿಸ್ಮಸ್ ಟ್ರೀ ತರುವಂತೆ ಸನಾತನ ಹಿಂದೂ ವಿದ್ಯಾರ್ಥಿಗಳನ್ನು ಕೇಳಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಮಧ್ಯಪ್ರದೇಶದ ಶಾಲೆಗಳಿಗೆ ಕೇಳಿಕೊಂಡಿದೆ. ಕ್ರಿಸ್‌ಮಸ್ ಆಚರಣೆಯ ಭಾಗವಾಗಿ ವಿದ್ಯಾರ್ಥಿಗಳು ಸಾಂತಾ ಕ್ಲಾಸ್ ವೇಷ ಧರಿಸುವಂತೆ ಕೆಲವು ಶಾಲೆಗಳು ಒತ್ತಾಯಿಸುತ್ತಿವೆ ಎಂದು ಬಲಪಂಥೀಯ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಇದು ಹಿಂದೂ ಸಂಸ್ಕೃತಿ ಮೇಲಿನ "ದಾಳಿ" ಮತ್ತು ಹಿಂದೂ ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರೇರೇಪಿಸುವ ಪಿತೂರಿಯಾಗಿದೆ ಎಂದು ಅದು ಆರೋಪಿಸಿದೆ. ಶಾಲೆಗಳಿಂದ ಇಂತಹ ನಿರ್ದೇಶನದಿಂದ ಸಾಂತಾ ಕ್ಲಾಸ್ ಉಡುಪು ಖರೀದಿಸಬೇಕಾಗಿರುವುದರಿಂದ ಪೋಷಕರಿಗೆ ಆರ್ಥಿಕ ನಷ್ಟವನ್ನುಂಟುಮಾಡುತ್ತದೆ ಎಂದು ವಿಹೆಚ್ ಪಿ ಮಧ್ಯ ಭಾರತ ಘಟಕ ಪ್ರಕಟಣೆಯಲ್ಲಿ ಹೇಳಿದೆ.
ಮಕ್ಕಳನ್ನು ರಾಮ, ಕೃಷ್ಣ, ಗೌತಮ ಬುದ್ಧ, ಮಹಾವೀರ, ಗುರು ಗೋವಿಂದ್ ಸಿಂಗ್, ಮಹಾನ್ ಕ್ರಾಂತಿಕಾರಿಗಳನ್ನಾಗಿ ಮಾಡಬೇಕು, ಆದರೆ ಸಂತನಲ್ಲ. ಭಾರತವು ಸಂತರ ನಾಡು ಮತ್ತು ಸಂತ ನಾಡಲ್ಲ ಎಂದು ಸಂಘಟನೆ ಹೇಳಿದೆ. ಪೋಷಕರ ಪೂರ್ವಾನುಮತಿ ಇಲ್ಲದೆ ಹಿಂದೂ ಮಕ್ಕಳು ಸಾಂತಾಕ್ಲಾಸ್ ವೇಷ ಧರಿಸದಂತೆ ಎಲ್ಲಾ ಶಾಲೆಗಳಿಗೆ ವಿನಂತಿಸಲಾಗಿದೆ ಮತ್ತು ಒಂದು ವೇಳೆ ಹಾಗೆ ಮಾಡಿದ ಶಾಲೆಗಳ ವಿರುದ್ಧ ವಿಎಚ್‌ಪಿ ಕಾನೂನುಬದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಧ್ಯಪ್ರದೇಶದ 16 ಜಿಲ್ಲೆಗಳ ಶಾಲೆಗಳಿಗೆ ಈ ಕುರಿತು ಪತ್ರವನ್ನು ಕಳುಹಿಸಲಾಗಿದೆ ಎಂದು ವಿಎಚ್‌ಪಿ ಮಧ್ಯ ಭಾರತ ಪ್ರಾಂತ ಪ್ರಚಾರ್ ಪ್ರಮುಖ್ ಜಿತೇಂದ್ರ ಚೌಹಾಣ್ ತಿಳಿಸಿದ್ದಾರೆ.
Advertisement