ಮೂರು ಈಶಾನ್ಯ ರಾಜ್ಯಗಳ ಚುನಾವಣೆಗೆ ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೋಮವಾರ ವೀಕ್ಷಕರನ್ನು ನೇಮಿಸಿದ್ದು, ಪಕ್ಷದ ಸಂಸದ ಮುಕುಲ್ ವಾಸ್ನಿಕ್ ಅವರನ್ನು ಮೂರು...
ಮುಕುಲ್ ವಾಸ್ನಿಕ್
ಮುಕುಲ್ ವಾಸ್ನಿಕ್

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಮೇಘಾಲಯ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೋಮವಾರ ವೀಕ್ಷಕರನ್ನು ನೇಮಿಸಿದ್ದು, ಪಕ್ಷದ ಸಂಸದ ಮುಕುಲ್ ವಾಸ್ನಿಕ್ ಅವರನ್ನು ಮೂರು ರಾಜ್ಯಗಳಿಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಪ್ರತಿ ರಾಜ್ಯಗಳಿಗೆ ತಲಾ ಇಬ್ಬರು ವೀಕ್ಷಕರನ್ನು ಕಾಂಗ್ರೆಸ್ ನೇಮಿಸಿದೆ.

"ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣವೇ ಜಾರಿಗೆ ಬರುವಂತೆ 2023ರ ವಿಧಾನಸಭಾ ಚುನಾವಣೆಗಳಿಗೆ ಹಿರಿಯ ವೀಕ್ಷಕರು ಮತ್ತು ವೀಕ್ಷಕರನ್ನು ನೇಮಿಸಿದ್ದಾರೆ" ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಜ್ಯಸಭಾ ಸಂಸದ ಮುಕುಲ್ ವಾಸ್ನಿಕ್ ಅವರನ್ನು ಮೂರು ರಾಜ್ಯಗಳಿಗೆ ಹಿರಿಯ ವೀಕ್ಷಕರನ್ನಾಗಿ ನೇಮಿಸಿದರೆ, ಕೇರಳದ ಕಾಂಗ್ರೆಸ್ ಸಂಸದ ಬೆನ್ನಿ ಮೆಹನಾನ್ ಮತ್ತು ಮಾಜಿ ಸಂಸದ ಜೆಡಿ ಸೀಲಂ ಅವರನ್ನು ಮೇಘಾಲಯ ಚುನಾವಣೆಗೆ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೊ ಸರ್ದಿನ್ಹಾ ಮತ್ತು ಕೆ ಜಯಕುಮಾರ್ ಅವರನ್ನು ನಾಗಾಲ್ಯಾಂಡ್‌ಗೆ ವೀಕ್ಷಕರನ್ನಾಗಿ ನೇಮಿಸಲಾಗಿದೆ ಮತ್ತು ಕಾಂಗ್ರೆಸ್‌ನ ದೆಹಲಿ ಘಟಕದ ನಾಯಕ ಅರವಿಂದರ್ ಸಿಂಗ್ ಲವ್ಲಿ ಮತ್ತು ಪಕ್ಷದ ಸಂಸದ ಅಬ್ದುಲ್ ಖಲೀಕ್ ಅವರನ್ನು ತ್ರಿಪುರಾ ಚುನಾವಣೆಗೆ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಮೂರು ಈಶಾನ್ಯ ರಾಜ್ಯಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com