ಮಧ್ಯ ಪ್ರದೇಶ: ಕಾಗುಣಿತ ತಪ್ಪಿಗೆ 5 ವರ್ಷದ ಬಾಲಕಿಯ ಕೈ ಮುರಿದ ಶಿಕ್ಷಕ; ಬಂಧನ

ಭೋಪಾಲ್‌ನಲ್ಲಿ ಖಾಸಗಿ ಟ್ಯೂಷನ್ ಹೇಳುತ್ತಿದ್ದ ಶಿಕ್ಷಕರೊಬ್ಬರು 'ಗಿಣಿ' ಪದವನ್ನು ಸರಿಯಾಗಿ ಬರೆಯದಿದ್ದಕ್ಕಾಗಿ ಐದು ವರ್ಷದ ಬಾಲಕಿಯ ಕೈಯ ತಿರುವಿದ್ದರಿಂದ ಕೈ ಮೂಳೆಯೇ ಮುರಿದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಭೋಪಾಲ್‌ನಲ್ಲಿ ಖಾಸಗಿ ಟ್ಯೂಷನ್ ಹೇಳುತ್ತಿದ್ದ ಶಿಕ್ಷಕರೊಬ್ಬರು 'ಗಿಣಿ' ಪದವನ್ನು ಸರಿಯಾಗಿ ಬರೆಯದಿದ್ದಕ್ಕಾಗಿ ಐದು ವರ್ಷದ ಬಾಲಕಿಯ ಕೈಯ ತಿರುವಿದ್ದರಿಂದ ಕೈ ಮೂಳೆಯೇ ಮುರಿದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, 22 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿ ಶಿಕ್ಷಕನನ್ನು ಪ್ರಯಾಗ್ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಅಪ್ರಾಪ್ತ ಬಾಲಕಿಯ ಕೈಯನ್ನು ತಿರುವಿದ್ದಾನೆ ಮತ್ತು ಗಿಳಿ ಎಂಬ ಪದವನ್ನು ಬರೆಯಲು ಸಾಧ್ಯವಾಗದ ಕಾರಣ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಹಬೀಬ್‌ಗಂಜ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮನೀಶ್ ರಾಜ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.

ಶಿಕ್ಷಕ ಬಾಲಕಿಯ ಕೈಯನ್ನು ತುಂಬಾ ಕೆಟ್ಟದಾಗಿ ತಿರುವಿದ್ದರಿಂದ ಅದು ಮುರಿದಿದೆ ಎಂದು ಅವರು ಹೇಳಿದ್ದಾರೆ.

ಘಟನೆಯ ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com